November 14, 2025

ವಿಟ್ಲ: ಸ್ಮಾರ್ಟ್ ಸಿಟಿ ಕಟ್ಟಡ- ಸಂತೆ ರಸ್ತೆಯಲ್ಲಿದೆ ಮೃತ್ಯುಕೂಪ: ಪಾದಚಾರಿಗಳು ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕುತ್ತು ಗ್ಯಾರಂಟಿ

0
image_editor_output_image582732311-1759686740759

ವಿಟ್ಲ: ಇಲ್ಲಿಯ ಸಂತೆ ರಸ್ತೆಯ ಬದಿಯಲ್ಲಿರುವ ಸ್ಮಾರ್ಟ್ ಸಿಟಿಯ ಕಟ್ಟಡದ ಒಂದು ಬದಿಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಪ್ರಪಾತಯೊಂದು ಬಾಯ್ತೆರೆದು ನಿಂತಿದ್ದು, ಪಾದಚಾರಿಗಳು ಆತಂಕದಲ್ಲಿ ದಿನದೂಡುತ್ತಿದೆ.

ಕೆಲವು ವರ್ಷಗಳ ಹಿಂದೆ ವಿಟ್ಲದ ಸ್ಮಾರ್ಟ್ ಸಿಟಿ ಕಟ್ಟಡ ನಿರ್ಮಾಣಗೊಂಡಿದ್ದು, ಈಗಾಗಲೇ ಈ ಕಟ್ಟಡದಲ್ಲಿ ಬಹುತೇಕ ಅಂಗಡಿಗಳು ವ್ಯಾಪಾರ ನಡೆಸುತ್ತಿದೆ. ಸಂತೆ ರಸ್ತೆಗೆ ತಾಗಿಕೊಂಡಿರುವ 1ನೇ ಮಹಡಿಯ ಒಂದು ಬದಿಯನ್ನು ಅಂದರೆ ನೆಲ ಮಹಡಿಯ ಮೇಲ್ಭಾಕ್ಕೆ ತಡೆಗೋಡೆ ಅಥವಾ ಒಂದು ಬದಿಯನ್ನು ಮುಚ್ಚದ ಕಾರಣ ಇದು ಆತಂಕಕ್ಕೆ ಕಾರಣವಾಗಿದೆ. ಪಾದಚಾರಿ ರಸ್ತೆಯ ಬದಿಯಲ್ಲಿ ಈ ದುಸ್ಥಿತಿ ಇದ್ದು, ಆತಂಕಕ್ಕೆ ಕಾರಣವಾಗಿದೆ. ಅದಲ್ಲದೇ ಪ್ರತಿ ಮಂಗಳವಾರ ಇಲ್ಲಿ ವಾರದ ಸಂತೆ ನಡೆಯುತ್ತಿದ್ದು, ಇದರ ಪಕ್ಕದಲ್ಲೇ ವ್ಯಾಪಾರ ಮಾಡಲಾಗುತ್ತಿದೆ. ಈ ಸಂದರ್ಭ ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕುತ್ತು ಬರುವುದಂತೂ ಸತ್ಯ. ಬದಿಯಲ್ಲಿರುವ ಖಾಲಿ ಬಿಟ್ಟಿರುವ ಸ್ಥಳಕ್ಕೆ ತಡೆಗೋಡೆ ನಿರ್ಮಿಸಬೇಕು ಅಥವಾ ಬಾಯ್ತೆರೆದು ನಿಂತಿರುವ ಸ್ಥಳಕ್ಕೆ ಮುಚ್ಚಳ ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!