February 2, 2026

ವಿಟ್ಲದ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ M7 ವೆಂಚರ್ ಸಂಸ್ಥೆ ಶುಭಾರಂಭ: ವಿಟ್ಲದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಸ ಹುರುಪು

0
image_editor_output_image493441177-1759680381795

ವಿಟ್ಲ: ವಿಟ್ಲದ ಸಂತೆ ರಸ್ತೆಯ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ನೂತನವಾಗಿ ಮನ್ಸೂರ್ ಇಬ್ರಾಹಿಂ ಮಾಲಕತ್ವದ M7 ವೆಂಚರ್ ಕಚೇರಿ ಶುಭಾರಂಭಗೊಂಡಿತು.

ಸಂಸ್ಥೆಯ ಮಾಲಕ ಮನ್ಸೂರ್ ಇಬ್ರಾಹಿಂ ಅವರ ತಾಯಿ ಫಾತಿಮಾ ಇಬ್ರಾಹಿಂ ಅವರು ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ  ಎಂ ನೌಫಲ್ ಸಿ.ಎ ಭಾಗವಹಿಸಿದ್ದರು.
ಇರ್ಷಾದ್ ಡಿಸೈನ್ ಮಾಸ್ಟರ್, ನಾಫೀ ಡಿಸೈನ್ ಮಾಸ್ಟರ್, ನೌವಾಫ್ ಡಿಸೈನ್ ಮಾಸ್ಟರ್, ಆರೀಸ್ ಕತ್ತಾರ್, ನೌಫಲ್ ಪಿಲಿಪ್ಪೆ, ಕೌಶರ್ ಕುಂಡಡ್ಕ, ಅನೀಸ್ ಸವಣೂರು, ಸಮೀರ್ ಎಸ್ ಮಾರ್ಟ್, ಶಾಕೀರ್ ಅಳಕೆಮಜಲು, ಅಝೀಜ್ ಸನ, ಗೌಸ್ ಎಂ ಜಿ ಆರ್ , ದಾವೂದ್ ರಾಯಲ್, ಕಲಂದರ್ ಮಂಡ್ಯೂರು, ಕರೀಮ್,  ವಿಟ್ಲ ಪಡ್ನೂರು ಗ್ರಾ.ಪಂ ಸದಸ್ಯ ಹರ್ಷದ್ ಕುಕ್ಕಿಲ, ರಹೀಮ್ ಕುಂಡಡ್ಕ ಮೊದಲಾದವರು ಭೇಟಿ ನೀಡಿ ಶುಭ ಹಾರೈಸಿದರು.

ಮನ್ಸೂರ್ ಇಬ್ರಾಹಿಂ ಮಾಲಕತ್ವದ ಈ ಸಂಸ್ಥೆಯಲ್ಲಿ
ರಿಯಲ್ ಎಸ್ಟೇಟ್, ವ್ಯಾಪಾರ ನೆಟ್ ವರ್ಕಿಂಗ್, ಕ್ರಾಸ್ -ಬಾರ್ಡರ್ ಡೀಲ್ ಗಳು, ಸ್ಟಾರ್ಟ್ -ಆಪ್ ಡೀಲ್ ಗಳು ಮತ್ತು ಸಲಹೆಗಳು, ಹೂಡಿಕೆ ಸಿಂಡಿಕೇಶನ್ ಮತ್ತು ಸಲಹೆಗಳು , ವಿಲೀನಗಳು ಮತ್ತು ಸ್ವಾಧೀನಗಳು ಸಂಸ್ಥೆಯ ಉದ್ದೇಶವಾಗಿದೆ ಎಂದು ಸಂಸ್ಥೆಯ ಮಾಲಕ ಮನ್ಸೂರ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!