ಗ್ರಾಮ ಒನ್ ಸೇವಾ ಕೇಂದ್ರ ಕೊಡಂಗಾಯಿ: ಗಾಂಧಿ ಜಯಂತಿ ಆಚರಣೆ ಹಾಗೂ ಆಧಾರ್ ಕಾರ್ಡ್ ಶಿಬಿರ
ವಿಟ್ಲ ಪಡ್ನೂರು ಸೇವಾ ಕೇಂದ್ರ ಕೊಡಂಗಾಯಿ ಇದರ ಎರಡನೇ ವಾರ್ಷಿಕೋತ್ಸವದ ಹಾಗೂ ಗಾಂಧಿ ಜಯಂತಿ ಆಚರಣೆ ಪ್ರಯಕ್ತ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ನವೀಕರಣ ಶಿಬಿರ ಕೊಡಂಗಾಯಿ ಕಛೇರಿಯಲ್ಲಿ ನಡೆಯಿತು
ಸುಮಾರು 50 ಕ್ಕಿಂತ ಅಧಿಕ ಜನರು ಪ್ರಯೋಜನ ಪಡೆದರು.
ವಿಟ್ಲ ಪಡ್ನೂರು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ *ಶ್ರೀ ಶೈಲ ಡೋಣರ* ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷರಾದ ಶ್ರೀಮತಿ ಶ್ವೇತ ರವಿಕುಮಾರ್ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗಾಂಧಿ ಜಯಂತಿ ಆಚರಣೆಗೆ ಚಾಲನೆ ಮಾಡಿದರು
ಕಾರ್ಯಕ್ರಮದಲ್ಲಿ ಊರಿನ ಹಲವು ಹಿರಿಯ ವ್ಯಕ್ತಿಗಳು ಹಾಗೂ ಯುವಕರು ಭಾಗವಹಿಸಿದರು
ಸೇರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು
ಬಿ .ಸಂದೇಶ್ ಶೆಟ್ಟಿ ಬಿಕ್ನಾಜೆ
ಮಾಲಕರು : ಗ್ರಾಮ ಒನ್ ಸೇವಾ ಕೇಂದ್ರ ವಿಟ್ಲ ಪಡ್ನೂರು





