February 1, 2026

ಕೃಷ್ಣ ರಾವ್ ಪ್ರಕರಣದಲ್ಲಿ ಜಿಲ್ಲೆಯ ಯಾವುದೇ ಹಿಂದೂ ಸಂಘಟನೆಗಳು ತುಟಿ ಬಿಚ್ಚುತ್ತಿಲ್ಲ: ಪ್ರತಿಭಾ ಕುಳಾಯಿ

0
image_editor_output_image1006389503-1759489420363.jpg

ಮಂಗಳೂರು: ಕೃಷ್ಣ ರಾವ್ ಪ್ರಕರಣದಲ್ಲಿ ಜಿಲ್ಲೆಯ ಯಾವುದೇ ಹಿಂದೂ ಸಂಘಟನೆಗಳು ಮಾತನಾಡುತ್ತಿಲ್ಲ. ಇದು ಹಿಂದೂ ಮುಸ್ಲಿಂ ಸಮಸ್ಯೆ ಆಗಿದ್ದರೆ, ಅದರ ಚಿತ್ರಣವೇ ಬದಲಾಗುತ್ತಿದ್ದು, ಎಷ್ಟೋ ಜನರ ಪ್ರಾಣ ಹೊಗುತ್ತಿತ್ತು, ಆದರೆ ಜಿಲ್ಲೆಯ ನೀಚ ರಾಜಕಾರಣಿಗಳು ಇವತ್ತು ತುಟಿ ಬಿಚ್ಚುತ್ತಿಲ್ಲ ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡು ಮಗು ನೀಡಿ ಇದೀಗ ಆರೋಪಿ ಕೃಷ್ಣ ರಾವ್ ಇದೀಗ ಮದುವೆಗೆ ಒಪ್ಪುತ್ತಿಲ್ಲ, ಆರೋಪಿ ಬೇಕಾದ ಕಡೆ ಮಕ್ಕಳನ್ನು ಮಾಡ್ತಾ ಇದ್ದಾನೆ…ಅಪ್ಪ ಆಶ್ರಮ ಓಪನ್ ಮಾಡೋದು ಒಳ್ಳೆಯದು ಎಂದರು.

ನಮ್ಮ ಜಿಲ್ಲೆಯಲ್ಲಿ ಹಿಂದುತ್ವ ಬಿಟ್ಟರೆ ಬೇರೆ ಯಾವುದೇ ಸಬ್ಜೆಕ್ಟ್ ಇಲ್ಲ, ಆದರೆ ಸಂತ್ರಸ್ಥೆಯ ಸಮಾಜ ಹಿಂದುಳಿದ ಸಮಾಜಕ್ಕೆ ಸೇರಿದ್ದು, ಅವರ ಸಮುದಾಯದಲ್ಲಿ ಒಗ್ಗಟ್ಟಿಲ್ಲ. ಇವತ್ತು ಈಕೆ ನಾಳೆ ಇನ್ನೊಬ್ಬ ಯುವತಿಗೆ ಇದೇ ಸಮಸ್ಯೆ ಆಗುತ್ತೆ. ಇದು ಹಿಂದೂ ಮುಸ್ಲಿಂ ಸಮಸ್ಯೆ ಆಗಿದ್ದರೆ, ಅದರ ಚಿತ್ರಣವೇ ಬದಲಾಗುತ್ತಿದ್ದು, ಜಿಲ್ಲೆಯಲ್ಲಿ ಎಷ್ಟೋ ಜನರ ಪ್ರಾಣ ಹೊಗುತ್ತಿತ್ತು, ಆದರೆ ಜಿಲ್ಲೆಯ ನೀಚ ರಾಜಕಾರಣಿಗಳು ಇವತ್ತು ತುಟಿ ಬಿಚ್ಚುತ್ತಿಲ್ಲ ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!