July 4, 2026

ಪಳ್ಳಿ ಕುಂಞ ಉಪ್ಪಾಪ ಹಾಗೂ ಸಲ್ಮಾ ಉಮಾಮಾ ಫ್ಯಾಮಿಲಿ  ಕುಟುಂಬ ವತಿಯಿಂದ ಬೃಹತ್ ಫ್ಯಾಮಿಲಿ ಸಮ್ಮಿಲನ ಹಾಗೂ 2025-27ನೇ ಸಾಲಿನ ನೂತನ ಕುಟುಂಬ ಸಮಿತಿ ರಚನೆ

0
image_editor_output_image171472608-1759417280826

ಒಂದು ಬಳ್ಳಿ ಒಂದು ಕುಟುಂಬ ಎಂಬ ಧ್ಯೇಯದೊಂದಿಗೆ ಪಳ್ಳಿ ಕುಂಞಿ ಉಪ್ಪಾಪ ಹಾಗೂ ಸಲ್ಮಾ ಉಮಾಮಾ ಫ್ಯಾಮಿಲಿ ಇದರ ಬೃಹತ್ ಕುಟುಂಬ ಸಮ್ಮಿಲನ ಕಾರ್ಯಕ್ರಮ ಕೇಪು ಗ್ರಾಮದ ವಿಟ್ಲ ಗಾರ್ಡನ್ ನಲ್ಲಿ ನಡೆಯಿತು.

650ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಕುಟುಂಬ ಸದಸ್ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಉಮ್ಮರ್ ಮುಸ್ಲಿಯಾರ್ ಅಳಿಕೆ ಅಧ್ಯಕ್ಷತೆ ವಹಿಸಿದ್ದರು. ಅಶ್ರಫ್ ಸಅದಿ ಕರ್ಕಳ ಪ್ರಾರಂಭಿಕ ದುಆ ನಡೆಸಿ ಚಾಲನೆ ನೀಡಿ, ರಫೀಕ್ ಮದನಿ ಪಾಟ್ರಕೋಡಿ ಉದ್ಘಾಟಿಸಿದರು. ಹಂಝ ರಝ್ವಿ ಕಿರಾಅತ್ ಪಠಿಸಿದರು.

ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯ ವ್ಯಕ್ತಿಗಳಾದ ಅಬ್ದುಲ್ ಖಾದರ್ ಕರ್ಕಳ, ಆದಂ ಕುಂಞಿ ನೆಡ್ಯಾಳ, ಇಸ್ಮಾಯಿಲ್ ಪಾಟ್ರಕೋಡಿ, ಅಬ್ಬಾಸ್ ಕಡಂಬು, ಇಸ್ಮಾಯಿಲ್ ಪಳ್ಳ , ಹಸೈನಾರ್ ಮದಕ ಮೊದಲಾದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕುಟುಂಬ ಸದಸ್ಯರಾದ ಪ್ರಖ್ಯಾತ ದಫ್ ಉಸ್ತಾದ್ ಅಬ್ದುಲ್ ಖಾದರ್ ಕಡಂಬು, ಸಮಸ್ತ ಸೆಂಚುರಿ ಮುಹಲ್ಲಿಂ ಅವಾರ್ಡ್ ಪುರಸ್ಕೃತರಾದ ಎನ್ ಕೆ ಯೂಸುಫ್ ಮುಸ್ಲಿಯಾರ್ ಅಳಿಕೆ, ಆಯುರ್ವೇದ ವೈದ್ಯ ಪದ್ಧತಿಯ ಪದವಿ ಪಡೆದು ಸೇವೆಗೆ ಪಾದಾರ್ಪಣೆ ಮಾಡಿದ ಡಾ.‌ಶಕೀಲ್ ಅಹ್ಮದ್ (BAMS) ಕೊಡಂಗಾಯಿ, ಆಪರೇಷನ್ ಥಿಯೇಟರ್ ಟೆಕ್ನಾಲಜಿ ಪದವಿ ಪಡೆದು ಸೇವೆಗೆ ಪಾದಾರ್ಪಣೆ ಮಾಡಿದ ರಿಝ್ವಾನ್ ಕೇಪುಳಗುಡ್ಡೆ ಅವರನ್ನು ಅಭಿನಂದಿಸಲಾಯಿತು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಅಂತಿಮ ಪದವಿ ಪರೀಕ್ಷೆ ಹಾಗೂ ಮದ್ರಸ 5, 7,10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಎನ್ ಕೆ ಯೂಸುಫ್ ಮುಸ್ಲಿಯಾರ್ ಅಳಿಕೆ ಕುಟುಂಬದ ಪರಿಚಯ ಹೇಳಿದರು ಹಾಗೂ ಅಬೂಬಕ್ಕರ್ ಸಖಾಫಿ ಕರ್ಕಳ, ಲತೀಫ್ ಅಝ್ಹರಿ, ಇಬ್ರಾಹಿಂ ಝೈನಿ, ಹಮೀದ್ ಮುಸ್ಲಿಯಾರ್ ಪಾಟ್ರಕೋಡಿ, ಹಮೀದ್ ಮಾಸ್ಟರ್ ಬಾಯಾರ್, ಯೂಸುಫ್ ನೇರಳಕಟ್ಟೆ ಮೊದಲಾದವರು ಶುಭಹಾರೈಸಿದರು.


   2025-27ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು, ಅಧ್ಯಕ್ಷರಾಗಿ ಡಾ. ಹಸೈನಾರ್ ಕೊಡಂಗಾಯಿ, ಪ್ರಧಾನ ಕಾರ್ಯದರ್ಶಿ ಫಾರೂಕ್ ಕೆದುವಡ್ಕ, ಕೋಶಾಧಿಕಾರಿ ಝಾಕಿರ್ ಹುಸೈನ್ (ಸಿಟಿ ಮೆಡಿಕಲ್) ಕಾನತ್ತಡ್ಕ , ಉಪಾಧ್ಯಕ್ಷರಾಗಿ ಹಮೀದ್ ಮಾಸ್ಟರ್ ಬಾಯಾರ್, ಎ ಪಿ ಇಬ್ರಾಹಿಂ ಅಳಿಕೆ, ಅಥಾವುಲ್ಲಾ ನೇರಳಕಟ್ಟೆ, ಅಬೂಬಕ್ಕರ್ ಸಾಲೆತ್ತೂರು, ಕಾರ್ಯದರ್ಶಿಗಳಾಗಿ ಅಶ್ರಫ್ ಸಅದಿ ಕರ್ಕಳ, ರಫೀಕ್ ಪಳ್ಳ ಕೊಡಂಗಾಯಿ, ಎನ್ ಕೆ ಜಲೀಲ್ ಅಳಿಕೆ, ಅಬ್ದುಲ್ ರಹೀಂ ಪಾಟ್ರಕೋಡಿ ಹಾಗೂ ಗೌರವ ಸಲಹೆಗಾರರಾಗಿ ಉಮ್ಮರ್ ಮುಸ್ಲಿಯಾರ್ ಅಳಿಕೆ, ಹಮೀದ್ ಮುಸ್ಲಿಯಾರ್ ಪಾಟ್ರಕೋಡಿ, ಎನ್ ಕೆ ಯೂಸುಫ್ ಮುಸ್ಲಿಯಾರ್ ಅಳಿಕೆ, ಯೂಸುಫ್ ಕಡಂಬು ಸೇರಿದಂತೆ ಒಟ್ಟು 35ರಷ್ಟು ಮಂದಿಯನ್ನು ನೂತನ ಸಮಿತಿಗೆ ಆಯ್ಕೆ ಮಾಡಲಾಗಿದೆ.  ಮಕ್ಕಳಿಗೆ, ಯುವಕ, ಯುವತಿಯರಿಗೆ, ಮಹಿಳೆಯರಿಗೆ ಹಾಗೂ ಹಿರಿಯರಿಗೆ ವಿವಿಧ ಸ್ಪರ್ಧೆಗಳು ನಡೆಸಿ ಬಹುಮಾನ ವಿತರಿಸಲಾಯಿತು. ಮರಣ ಹೊಂದಿದ ಕುಟುಂಬ ಸದಸ್ಯರ ಹೆಸರಿನಲ್ಲಿ ತಹ್ಲೀಲ್ ಹೇಳಿ ದುಆ ನಡೆಸಲಾಯಿತು. ಎನ್ ಕೆ ಸಿದ್ದಿಕ್ ಅಳಿಕೆ ಸ್ವಾಗತಿಸಿ, ಕೊನೆಯಲ್ಲಿ ನೂತನ ಕಾರ್ಯದರ್ಶಿ ಫಾರೂಕ್ ಕೆದುವಡ್ಕ ಧನ್ಯವಾದ ಹೇಳಿದರು. ಅಶ್ಫಾಕ್ ಕೊಡಂಗಾಯಿ ಕಾರ್ಯಕ್ರಮ ನಿರೂಪಿಸಿ, ರಫೀಕ್ ಪಳ್ಳ, ಶಾಫಿ ಕೆದುವಡ್ಕ, ಇಂಜಿನಿಯರ್ ಶಾಫಿ, ಆಶಿಕ್ ಕೊಡಂಗಾಯಿ ಮೊದಲಾದವರು ಸಹಕರಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!