ವಿಟ್ಲ: ಗಾಂಧಿನಗರ ಮದರಸ ಮೀಲಾದ್ ಕಾರ್ಯಕ್ರಮ
ವಿಟ್ಲ: ಗಾಂಧಿನಗರ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಮೀಲಾದ್ ಕಾರ್ಯಕ್ರಮವು ಅಧ್ಯಕ್ಷ ಅಬೂಬಕರ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ( 20- 9- 2025) ನಡೆಯಿತು.
ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಆರಿಫ್ ಬಾಖವಿ ಪ್ರವಾದಿ ಸಂದೇಶ ನೀಡಿದರು.
ಈ ಕಾರ್ಯಕ್ರಮದಲ್ಲಿ ಮದರಸ ವಿದ್ಯಾರ್ಥಿಗಳಿಂದ ಕವಾಲಿ,ಪ್ರವಾದಿ ಸಂಕೀರ್ತನೆ ಹಾಡುಗಳು,ಬುರ್ದಾ ಹಾಗೂ ವಿವಿಧ ಸ್ಪರ್ಧೆಗಳು ನಡೆದುವು.
ವಿಟ್ಲ ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ,ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ,
ಮಹಮ್ಮದ್ ಯು. ಹಾಜಿ ಇಸ್ಮಾಯಿಲ್ ನೀರಕಣಿ,ಮನ್ಸೂರ್ ಖಾದರ್ ಹಾನೆಸ್ಟ್, ಮಹಮ್ಮದ್ ಅಲಿ ನೆಕ್ಕರೆಕಾಡು,ಇಬ್ರಾಹಿಂ ಕುಂಞಿ ಮಾಲಮೂಲೆ,ಅಝೀಝ್ ನೆಕ್ಕರೆಕಾಡು ಶಿಹಾಬುದ್ದೀನ್ ಫಾಳಿಲಿ,ಇಸ್ಮಾಯಿಲ್ ಮದನಿ,ಝಕರಿಯಾ ಸಖಾಫಿ ಮುಂತಾದವರು ಉಪಸ್ಥಿತರಿದ್ದರು.




