March 22, 2026

ಬಂಟ್ವಾಳ: ಅಪರಿಚಿತ ವ್ಯಕ್ತಿಗೆ ವಾಹನ ಡಿಕ್ಕಿ: ಪಾದಚಾರಿ ಮೃತ್ಯು

0
images-76.jpeg

ಬಂಟ್ವಾಳ: ಅಪರಿಚಿತ ವ್ಯಕ್ತಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಶನಿವಾರ ಬಂಟ್ವಾಳದಲ್ಲಿ ನಡೆದಿದ್ದು ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾರೆ.

ತಲಪಾಡಿ ರಸ್ತೆಯ ಬದಿಯಲ್ಲಿ ಅಂದಾಜು 61 ವಯಸ್ಸಿನ ಪಾದಾಚಾರಿಗೆ ವಾಹನ ಢಿಕ್ಕಿ ಹೊಡೆದಿದೆ.

ಪಾದಾಚಾರಿ ಗಂಭೀರ ಗಾಯವಾಗಿ, ಅಧಿಕ ರಕ್ತಸ್ರಾವವಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಗಂಭೀರ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಈ ವರೆಗೆ ಸಿಗದೆ ಇರುವುದರಿಂದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಕುಟುಂಬವರಿಗಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ.

ಒಂದು ವೇಳೆ ಯಾರಾದರೂ ಇವರ ಪರಿಚಯವಿದ್ದು ಅಥವಾ ಸಂಬಂಧಿಕರು ಇದ್ದರೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಹೋಗಬಹುದು ಅಥವಾ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯನ್ನು ಸಂಪರ್ಕ ಮಾಡಬಹುದು ಎಂದು ಟ್ರಾಫಿಕ್ ಎಸ್. ಐ. ರಾಜೇಶ್ ಕೆ.ವಿ. ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!