March 5, 2026

ಎಸ್ಐಟಿ ತಂಡದ ನೈತಿಕ ಸ್ಥೈರ್ಯ ಕುಗ್ಗಿಸಲು ಹುನ್ನಾರ: ಲಕ್ಷಾಂತರ ಜನರನ್ನ ಸೇರಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ ಮಹೇಶ್ ಶೆಟ್ಟಿ ತಿಮರೋಡಿ

0
image_editor_output_image-781308377-1757754180933.jpg

ಮಂಗಳೂರು: ಎಸ್ ಐ ಟಿ ತಂಡದ ನೈತಿಕ ಸ್ಥೈರ್ಯ ಕುಗ್ಗಿಸಲು ಹುನ್ನಾರ ನಡೆಯುತ್ತಿದ್ದು, ದುಷ್ಟ ಶಕ್ತಿಗಳ ಹುನ್ನಾರವನ್ನು ಮೆಟ್ಟಿ ನಿಲ್ಲಲು ಲಕ್ಷಾಂತರ ಜನರನ್ನ ಸೇರಿಸಿ ಮೌನ ಪ್ರತಿಭಟನೆಯ ಎಚ್ಚರಿಕೆಯನ್ನು ಮಹೇಶ್ ಶೆಟ್ಟಿ ತಿಮರೋಡಿ ನೀಡಿದ್ದಾರೆ.

ಈ ಕುರಿತಂತೆ ಮಾತನಾಡಿದ ಅವರು ಸೌಜನ್ಯ ಹೋರಾಟ ಹಾಗು ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ ಐ ಟಿ ಪಾರದರ್ಶಕ ತನಿಖೆ ನಡೆಸುತ್ತಿದೆ. ಎಸ್ ಐ ಟಿ ತಂಡವನ್ನ ದುರ್ಬಲ ಮಾಡುವ ಪ್ರಯತ್ನ ನಡೆಯುತ್ತಿದೆ. ಎಸ್ ಐ ಟಿ ಒಳ್ಳೆಯ ತನಿಖೆ ಮಾಡುತ್ತಿದೆ. ಆದರೆ ಅವರ ಮನಸನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಎಸ್ ಐ ಟಿ ಗೆ ಶಕ್ತಿ ತುಂಬಲು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡುತ್ತಿದ್ದೇವೆ.

ಪ್ರತಿಭಟನೆಯ ಸಮಯ ದಿನವನ್ನು ನಿಗದಿ ಮಾಡುತ್ತೇವ ಎಂದರು. ಮಹಾತ್ಮ ಗಾಂಧಿಯವರ ಶಾಂತಿಯ ಮಂತ್ರದ ಪ್ರೇರಣೆಯಡಿ ಮೌನ ಪ್ರತಿಭಟನೆ ಮಾಡಲಿದ್ದೇವೆ. ಬೆಳ್ತಂಗಡಿ ತಾಲೂಕಿನಲ್ಲಿ ಲಕ್ಷಾಂತರ ಜನ ಸೇರಿ ಮೌನ ಪ್ರತಿಭಟನೆ ಮಾಡಲಿದ್ದೇವೆ. ಸೆಪ್ಟೆಂಬರ್ 16ನೇ ತಾರೀಕು ಸಂಕ್ರಮಣ ದಿವಸ ಎಲ್ಲಾ ಮಠ ಮಂದಿರ ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಎಸ್ ಐ ಟಿ ತಂಡಕ್ಕೆ ಸತ್ಯ ಹೊರ ತರಲು ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡುತ್ತೆವೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!