ಮಂಗಳೂರು: ಯಾವುದೇ ಹಬ್ಬ ಆಚರಣೆಗೆ ಪೊಲೀಸರು ತೊಂದರೆ ಕೊಟ್ಟಿಲ್ಲ: ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ
ಮಂಗಳೂರು: ಯಾವುದೇ ಹಬ್ಬ ಆಚರಣೆಗೆ ಪೊಲೀಸರು ಎಲ್ಲೂ ತೊಂದರೆ ಕೊಟ್ಟಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಮೈಕ್ ಅಳವಡಿಸುತ್ತಿರುವುದಕ್ಕಷ್ಟೇ ನಮ್ಮ ನಿರ್ಬಂಧ ಇರುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತೆ ಸ್ಪಷ್ಟ ಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೆಹರೂ ಮೈದಾನದಲ್ಲಿ ಗಣೇಶೋತ್ಸವದ ಹಬ್ಬ ಭಾರೀ ಸಂಭ್ರಮದಿಂದ ನಡೆದಿದೆ. ರಾತ್ರಿ 2.30ರವರೆಗೆ ನಡೆದಿದೆ. ಆದರೆ ಪೊಲೀಸರು ಎಲ್ಲೂ ಅಡ್ಡಿ ಪಡಿಸಿಲ್ಲ. ನಾವು ಮಾಡುವ ಸೆಲಬ್ರೇಷನ್‌ನಿಂದ ನಮಗೆ ಸಂಭ್ರಮ ಇರಬೇಕು. ಆದರೆ ಬೇರೆಯವರಿಗೆ ಅದರಿಂದ ತೊಂದರೆ ಆಗಬಾರದು. ಮೈದಾನದಲ್ಲಿ ಕಾರ್ಯಕ್ರಮ ಮಾಡುವಾಗ 50 ಮೀಟರ್ ಇದ್ದರೆ ಶಬ್ದ 50 ಮೀಟರ್‌ಗಷ್ಟೇ ಇರಲಿ. ಶಾಂತಿ ಸಭೆ ಮಾಡಿದ್ದಾಗ ಸ್ಥಳೀಯರೇ ಬಂದು ನಮಗೆ ಮೈಕ್ ಬೇಡ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸುಲಿಗೆ ಪ್ರಕರಣದಲ್ಲಿ ಭಾಗಿಯಾದ




