ಶರಣ್ ಪಂಪುವೆಲ್ ವಿರುದ್ಧದ ನಿರ್ಬಂಧ ರದ್ದು
ಚಿತ್ರದುರ್ಗ: ನಗರದಲ್ಲಿ ನಾಳೆ ನಡೆಯಲಿರುವ ಹಿಂದು ಮಹಾಗಣಪತಿ ಶೋಭಾಯಾತ್ರೆಯಲ್ಲಿ ಭಾಗಿಯಾಗಲು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಗೆ ಹೇರಿದ್ದ ನಿರ್ಬಂಧ ತೆರವು ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲಾಡಳಿತ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ನಿರ್ಬಂಧ ಹೇರಿದ್ದು, ಈ ಹಿನ್ನೆಲೆಯಲ್ಲಿ ಇಂದು ಹೈಕೋರ್ಟ್ ಚಿತ್ರದುರ್ಗದಲ್ಲಿ ನಾಳೆ ನಡೆಯುವ ಹಿಂದು ಮಹಾಗಣಪತಿ ಶೋಭಾ ಯಾತ್ರೆಯಲ್ಲಿ ಭಾಗಿಯಾಗಲು ಅನುಮತಿ ನೀಡಿದೆ. ವಕೀಲರಾದ ಅರುಣ್ ಶಾಮ್ ಮತ್ತು ಸುಯೋಗ್ ಹೇರಳೆ ವಾದಿಸಿದರು.




