March 4, 2026

ಉಳ್ಳಾಲ: ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳವು: ಆರೋಪಿ ಸಹಿತ 1.80 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ

0
image_editor_output_image-401358165-1757748802422.jpg

ಉಳ್ಳಾಲ: ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕದ್ದ ಕಳ್ಳಿಯನ್ನು ಉಳ್ಳಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ಆಕೆಯಿಂದ 1.80 ಲಕ್ಷ ರೂಪಾಯಿ ಮೌಲ್ಯದ 18 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತಳನ್ನು ಉಳ್ಳಾಲ ಅಕ್ಕರೆಕೆರೆ ನಿವಾಸಿ ಮಿನ್ನತ್ ಎಂದು ಗುರುತಿಸಲಾಗಿದೆ. ಬೆಳ್ಮ ಗ್ರಾಮದ ನಿವಾಸಿ ರಹಮತ್ ಎಂಬ ಮಹಿಳೆ ಕಳೆದ ಜೂನ್ 2ರಂದು ತನ್ನ ಮಕ್ಕಳೊಂದಿಗೆ ತೊಕ್ಕೊಟ್ಟಿನ ಸಾಗರ್ ಕಲೆಕ್ಷನ್ ಬಟ್ಟೆ ಮಳಿಗೆಗೆ ಬಟ್ಟೆ ಖರೀದಿಸಲು ಬಂದಿದ್ದ ವೇಳೆ ಮಳೆ ಬಂದ ಕಾರಣ ಸ್ಥಳೀಯ ಬೇಕರಿಯ ಮುಂದೆ ಆಶ್ರಯ ಪಡೆದಿದ್ದರು.

ಈ ವೇಳೆ ರಹಮತ್ ಅವರ ಮಗಳ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಯಾರೋ ಬುರ್ಖಾ ಧರಿಸಿದ್ದ ಹೆಂಗಸು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರಹಮತ್ ದೂರು ದಾಖಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!