ಹಾಸನ ರೀತಿಯಲ್ಲೇ ಮತ್ತೊಂದು ಅಪಘಾತ: ಟ್ರಕ್ ಢಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸಾವು, ಮತ್ತಿಬ್ಬರು ಗಂಭೀರ
ಬೆಂಗಳೂರು : ಹಾಸನದಲ್ಲಿ ನಡೆದ ರೀತಿಯಲ್ಲೇ ಇದೀಗ ಬೆಂಗಳೂರಿನಲ್ಲೊಂದು ಅಪಘಾತ ನಡೆದಿದ್ದು, ಟ್ರಕ್ ಒಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನಪ್ಪಿ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮೃತರನ್ನು ಯೇಸು.ಡಿ ಮತ್ತು ಜೆನ್ನಿಫರ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಆಟೋದಲ್ಲಿದ್ದರು ಎಂದು ತಿಳಿದುಬಂದಿದೆ. ಅಡ್ಡದಾರಿಯಿಂದ ಬಂದ ಟ್ರಕ್ ಸುಮ್ಮನಹಳ್ಳಿ ರಸ್ತೆಗೆ ಇಳಿದಾಗ ಬ್ರೇಕ್ ಫೇಲ್ ಆಗಿ ಮುಂದೆ ಇದ್ದ ಆಟೋ ಮತ್ತು ಕಾರಿಗೆ ಡಿಕ್ಕಿಯಾಗಿದೆ.
ಇದರಿಂದ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಟೋ ಎರಡು ತುಂಡಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮತ್ತಿಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ




