March 4, 2026

ಕೋ‌ಝಿಕ್ಕೋಡ್: ನಾಳೆ (ಸೆ.13) ಅಂತರಾಷ್ಟ್ರೀಯ ಮೀಲಾದ್ ಸಮ್ಮೇಳನ

0
IMG-20250912-WA0000.jpg

ಕೋಝಿಕ್ಕೋಡ್: ‘ಪುಣ್ಯವಸಂತ 1500’ ಎಂಬ ಪ್ರಮೇಯದಲ್ಲಿ ಮರ್ಕಝ್‌ನ ಅಧೀನದಲ್ಲಿ ಆಯೋಜಿಸಲಾಗುತ್ತಿರುವ ಅಂತರರಾಷ್ಟ್ರೀಯ ಮೀಲಾದ್ ಸಮ್ಮೇಳನ ನಾಳೆ (ಸೆಪ್ಟೆಂಬರ್ 13 ಶನಿವಾರ) ಕಲ್ಲಿಕೋಟೆಯ ಟ್ರೇಡ್ ಸೆಂಟರ್‌ನಲ್ಲಿ ನಡೆಯಲಿದೆ.

ಪೈಗಂಬರ್ ಮುಹಮ್ಮದರನ್ನು ಹೆಚ್ಚು ತಿಳಿದುಕೊಳ್ಳಲು ಮತ್ತು ವಿವಿಧ ದೇಶಗಳ ಪ್ರವಾದಿ ಪ್ರಕೀರ್ತನ ವೈವಿಧ್ಯವನ್ನು ಆಸ್ವಾದಿಸಲು ಸಮ್ಮೇಳನವು ವೇದಿಕೆಯಾಗಲಿದೆ. ವಿವಿಧ ದೇಶಗಳ ಸಾಮಾಜಿಕ-ಸಾಂಸ್ಕೃತಿಕ ನಾಯಕರು ಮತ್ತು ರಾಜಕೀಯ ಪ್ರತಿನಿಧಿಗಳು ಮತ್ತು ಸಮಸ್ತ ನಾಯಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಪ್ರಸಿದ್ಧ ಅರಬ್ ಗಾಯಕ ಸಂಘವಾದ ಅಲ್ ಹುಬ್ ಟ್ರೂಪ್‌ನ ನಬಿ ಕೀರ್ತನ ಮಜ್ಲಿಸ್ ಮತ್ತು ಇಂಡಿಯನ್ ಗ್ರ‍್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ವಾರ್ಷಿಕ ಮದ್ಹುರ್ರಸೂಲ್ ಭಾಷಣ ಸಮ್ಮೇಳನದ ಮುಖ್ಯ ಆಕರ್ಷಣೆಯಾಗಲಿದೆ. ನಬಿ ದರ್ಶನಗಳು ಮತ್ತು ಅಧ್ಯಯನಗಳು ಹೆಚ್ಚು ಪ್ರಸ್ತುತತೆಯನ್ನು ಪಡೆಯುತ್ತಿರುವ ಸಮಕಾಲೀನ ವಾತಾವರಣದಲ್ಲಿ ಅವುಗಳನ್ನು ಹೆಚ್ಚು ಜನರಿಗೆ ಮತ್ತು ಸ್ಥಳಗಳಿಗೆ ಪ್ರಸರಿಸುವುದು ಸಮ್ಮೇಳನದ ಗುರಿಯಾಗಿದೆ.

ಸಮ್ಮೇಳನದ ಪ್ರಚಾರಕ್ಕಾಗಿ ನಾಳೆ (ಶನಿ) ಮಧ್ಯಾಹ್ನ 3 ಗಂಟೆಗೆ ನಗರದಲ್ಲಿ 1500 ಕಲಾ ಪ್ರತಿಭೆಗಳು ಸೇರಿಕೊಳ್ಳುವ ಮೆಗಾ ಘೋಷಯಾತ್ರೆ ನಡೆಯಲಿದೆ. ಕೇರಳ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್‌ಎಸ್‌ಎಫ್, ಎಸ್‌ಜೆಎಂ, ಎಸ್‌ಎಂಎ ಕೋಝಿಕ್ಕೋಡ್ ಜಿಲ್ಲಾ ಸಾರಥಿಗಳು, ಸಾದಾತುಗಳು, ಜಾಮಿಯಾ ಮರ್ಕಝ್ ಮುದರ್ರಿಸ್‌ಗಳು ಘೋಷಯಾತ್ರೆಗೆ ನಾಯಕತ್ವ ನೀಡಲಿದ್ದಾರೆ. ಮರ್ಕಝ್ ಕಾಂಪ್ಲೆಕ್ಸ್ ಪರಿಸರದಿಂದ ಆರಂಭವಾಗಿ ಅರಯಿಡತ್ತುಪಾಲಂ ಮಿನಿ ಬೈಪಾಸ್ ಮೂಲಕ ಸಮ್ಮೇಳನ ನಗರಿಯಲ್ಲಿ ಘೋಷಯಾತ್ರೆ ಸಮಾಪ್ತಿಯಾಗಲಿದೆ.

ಮಧ್ಯಾಹ್ನ 4:3೦ ಗಂಟೆಗೆ ಬುರ್ದಾ ಪಠಣದೊಂದಿಗೆ ಸಾರ್ವಜನಿಕ ಸಮ್ಮೇಳನಕ್ಕೆ ಆರಂಭವಾಗಲಿದೆ. ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಅಲಿ ಬಾಫಖಿ ತಂಙಳ್ ಪ್ರಾರ್ಥನೆ ನಿರ್ವಹಿಸಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮರ್ಕಝ್ ಡೈರೆಕ್ಟರ್ ಜನರಲ್ ಸಿ. ಮುಹಮ್ಮದ್ ಫೈಝಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೀಲಾದ್ ಸಮ್ಮೇಳನದ ಮುಖ್ಯ ಆಕರ್ಷಣೆಗಳಲ್ಲಿ ಒಂದಾದ ‘ಅಲ್ ಹುಬ್’ ಅಂತರರಾಷ್ಟ್ರೀಯ ಮೌಲಿದ್ ಟ್ರೂಪ್‌ನ ಪ್ರದರ್ಶನ ರಾತ್ರಿ 7:4೦ ಗಂಟೆಗೆ ನಡೆಯಲಿದೆ. ಇಂಡಿಯನ್ ಗ್ರ‍್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ವಾರ್ಷಿಕ ಮದ್ಹರ‍್ರಸೂಲ್ ಪ್ರಭಾಷಣ ನಡೆಸಲಿದ್ದಾರೆ.

ಸಮಸ್ತ ಸೆಕ್ರೆಟರಿ ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್, ಕೇರಳ ಮುಸ್ಲಿಂ ಜಮಾಅತ್ ಜನರಲ್ ಸೆಕ್ರೆಟರಿ ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ, ಎಸ್‌ವೈಎಸ್ ರಾಜ್ಯ ಪ್ರಸಿಡೆಂಟ್ ಡಾ. ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ, ಪೇರೋಡ್ ಅಬ್ದುರಹ್ಮಾನ್ ಸಖಾಫಿ, ಹಜ್ ಕಮಿಟಿ ಚೇರ್ಮನ್ ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್, ಮಜೀದ್ ಕಕ್ಕಾಡ್, ರಹ್ಮತ್ತುಲ್ಲಾ ಸಖಾಫಿ ಎಳಮರಂ, ಸಿ ಪಿ ಉಬೈದುಲ್ಲಾ ಸಖಾಫಿ, ಅನಸ್ ಅಮಾನಿ ಪುಷ್ಪಗಿರಿ ಮಾತನಾಡಲಿದ್ದಾರೆ. ಸಯ್ಯಿದ್ ಅಬ್ದುಲ್ ಫತ್ತಾಹ್ ಅಹ್ದಲ್ ಅವೇಲಂ, ಕೆ ಕೆ ಅಹ್ಮದ್ ಕುಟ್ಟಿ ಮುಸ್ಲಿಯಾರ್ ಕಟ್ಟಿಪ್ಪಾರ, ಅಬೂ ಹನೀಫಲ್ ಫೈಝಿ ತೆನ್ನಲ, ವಿ ಪಿ ಎಂ ಫೈಝಿ ವಿಲ್ಯಾಪ್ಪಳ್ಳಿ, ವಂಡೂರ್ ಅಬ್ದುರಹ್ಮಾನ್ ಫೈಝಿ, ಅಬ್ದುರಹ್ಮಾನ್ ಫೈಝಿ ಮಾರಾಯಮಂಗಲಂ, ಸಯ್ಯಿದ್ ಮುಹಮ್ಮದ್ ತುರಾಬ್ ಸಖಾಫಿ, ಸಯ್ಯಿದ್ ಶರಫುದ್ದೀನ್ ಜಮಲುಲ್ಲೈಲಿ, ಹಾಜಿ ಇಹ್ಸಾನ್ ಗಾಡವಾಲ, ಹಾಜಿ ಹಸೀನ್ ಅಗಾಡಿ ಮಹಾರಾಷ್ಟ್ರ, ಹಾಜಿ ಅಫ್ತಾಬ್ ಸೋಪಾರಿವಾಲ, ಎ ಪಿ ಅಬ್ದುಲ್ ಕರೀಂ ಹಾಜಿ ಚಾಲಿಯಂ, ಅಬ್ದುರಹ್ಮಾನ್ ಹಾಜಿ ಕುರ್ಟೂರ್, ಸಯ್ಯಿದ್ ಮುನೀರುಲ್ ಅಹ್ದಲ್, ಉಸ್ಮಾನ್ ಸಖಾಫಿ ತಿರುವತ್ರ, ಎನ್ ಅಲಿ ಅಬ್ದುಲ್ಲಾ, ಪ್ರೊಫ. ಎಕೆ ಅಬ್ದುಲ್ ಹಮೀದ್, ಎ ಸೈಫುದ್ದೀನ್ ಹಾಜಿ ಮುಂತಾದ ಪ್ರಮುಖರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!