ಉಡುಪಿ: ಗೂಡ್ಸ್ ಲಾರಿಯಲ್ಲಿ ಗಾಂಜಾ ಸಾಗಾಟ: 65 ಕೆಜಿ ಗಾಂಜಾ ಸಹಿತ ಇಬ್ಬರ ಬಂಧನ
ಉಡುಪಿ: ಕಡೆಕಾರು ಗ್ರಾಮದ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಹತ್ತಿರ ಗೂಡ್ಸ್ ಲಾರಿಯಲ್ಲಿ ಸಾಗಿಸುತ್ತಿದ್ದ 65 ಕೆಜಿ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಪೋಲೀಸರ ವಿಶೇಷ ತಂಡ ಗುರುವಾರ ಬಂಧಿಸಿದೆ.
ಬಂಧಿತ ಆರೋಪಿಗಳು ಹುಣಸೂರಿನ ಗಣೇಶ(38), ಆಂಧ್ರದ ಅನಂತಪುರಂನ ಪಿ. ಗೋಪಾಲ ರೆಡ್ಡಿ(43) ಎನ್ನುವವರಾಗಿದ್ದಾರೆ.
65 ಕೆಜಿ 39 ಗ್ರಾಂ ಗಾಂಜಾ( ಅಂದಾಜು ಮೌಲ್ಯ ರೂ. 32 ರಿಂದ 50 ಲಕ್ಷ ರೂ.), ಗೂಡ್ಸ್ ಲಾರಿ, 2 ಮೊಬೈಲ್ ಪೋನ್ ಗಳು, 1520 ರೂ. ನಗದು ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡು ಮಲ್ಪೆ ಪೊಲೀಸ್ ಠಾಣೆಯಲ್ಲಿ NDPS Act 1985 ರಂತೆ ಪ್ರಕರಣ ದಾಖಲಾಗಿದೆ.
ಸ್ವಾಧೀನ ಪಡಿಸಿದ ಸೊತ್ತುಗಳ ಅಂದಾಜು ಮೌಲ್ಯ 72 ಲಕ್ಷದ 21 ಸಾವಿರದ 520 ರೂ. ಎಂದು ಪೊಲೀಸರು ತಿಳಿಸಿದ್ದಾರೆ.




