March 4, 2026

ಎಸಿಯ ಕಂಪ್ರೆಸರ್ ಸ್ಫೋಟ: ಒಂದೇ ಕುಟುಂಬದ ಮೂವರು ಸಾವು

0
image_editor_output_image-256405307-1757407445181.jpg

ಚಂಡೀಗಢ: ಹರಿಯಾಣದ ಫರಿದಾಬಾದ್‌ನ ಕಟ್ಟಡ ಒಂದರಲ್ಲಿ ಎಸಿಯ ಕಂಪ್ರೆಸರ್ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ ಅವರ ಸಾಕು ನಾಯಿ ಕೂಡ ಸಾವಿಗೀಡಾಗಿದೆ.

ಮೃತರನ್ನು ಸಚಿನ್ ಕಪೂರ್, ಅವರ ಪತ್ನಿ ರಿಂಕು ಕಪೂರ್ ಮತ್ತು ಅವರ ಮಗಳು ಸುಜನ್ ಕಪೂರ್ ಎಂದು ಗುರುತಿಸಲಾಗಿದೆ. ನಾಲ್ಕು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಸೋಮವಾರ (ಸೆ.8) ಬೆಳಗಿನ ಜಾವ 1:30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಈ ವೇಳೆ, ಅವರು ವಾಸವಾಗಿದ್ದ ಎರಡನೇ ಮಹಡಿಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!