December 20, 2025

ಲೂಧಿಯಾನ ಕೋರ್ಟ್‌ ಆವರಣದಲ್ಲಿ ಸ್ಫೋಟ ಪ್ರಕರಣ:
ಬಾಂಬರ್‌ ಮಾಜಿ ಪೊಲೀಸ್‌ ಅಧಿಕಾರಿ!

0
9vv1r114_ludhiana-court-blast-suspect-cop-ndtv_625x300_24_December_21.jpg

ಲೂಧಿಯಾನ: ಪಂಜಾಬ್ ನ ಲೂಧಿಯಾನದ ನ್ಯಾಯಾಲಯದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಗುರುತಿಸಲಾಗಿದೆ. ಈತನನ್ನು ಮಾಜಿ ಪೊಲೀಸ್ ಅಧಿಕಾರಿ ಗಗನ್ ದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತನೇ ಬಾಂಬರ್ ಎಂದು ಶಂಕಿಸಲಾಗಿದೆ.

ಹೆಡ್ ಕಾನ್‌ಸ್ಟೆಬಲ್ ಆಗಿದ್ದ ಗಗನ್ ದೀಪ್ ಸಿಂಗ್ ನನ್ನು 2019 ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಎರಡು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದ. ಅವರನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.

ಆತನ ಸಿಮ್ ಕಾರ್ಡ್ ಮತ್ತು ವೈರ್‌ಲೆಸ್ ಡಾಂಗಲ್ ಸಹಾಯದಿಂದ ಆತನನ್ನು ಗುರುತಿಸಲು ಸಹಾಯ ಮಾಡಿತು ಮತ್ತು ಮೃತದೇಹ ಸಿಂಗ್ ಅವರದೇ ಎಂದು ಕುಟುಂಬದವರು ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟದಲ್ಲಿ ಪಾಕಿಸ್ತಾನಿ ಏಜೆನ್ಸಿಗಳು ಅಥವಾ ಖಲಿಸ್ತಾನಿ ಗುಂಪುಗಳು ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!