ಬಂಟ್ವಾಳ: ಬುಡೋಳಿ ಸಮೀಪ ಹೆದ್ದಾರಿಯಿಂದ ಕೆಳಕ್ಕುರುಳಿ ಸ್ವಿಫ್ಟ್ ಕಾರು: ಇಬ್ಬರಿಗೆ ಗಂಭೀರ ಗಾಯ
ಬಂಟ್ವಾಳದ ಬುಡೋಳಿ ಸಮೀಪ ಮಧ್ಯರಾತ್ರಿ ಸಂಭವಿಸಿದ ಭೀಕರ ಅಪಘಾತ ಸಂಭವಿಸಿದೆ.
ಸ್ವಿಫ್ಟ್ ಕಾರು ಹೆದ್ದಾರಿಯಿಂದ ಕೆಳಕ್ಕುರುಳಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನು ಇಬ್ಬರು ಸಣ್ಣಪುಟ್ಟವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಕಣಿವೆಗೆ ಉರುಳಿದೆ. ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದು, ಮಾಹಿತಿ ತಿಳಿದ ತಕ್ಷಣ ಮಾಣಿ ಸೋಷಿಯಲ್ ಇಕ್ವಾ ಆಂಬ್ಯುಲೆನ್ಸ್ ಮೂಲಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.





