ರಾಜ್ಯ ಸರಕಾರ ಗೋಮಾಂಸ ಭಕ್ಷಕರಿಗೆ ಎರಡೆರಡು ಹಂದಿ ಮರಿಗಳು ನೀಡಬೇಕು: ಸಂಘಪರಿವಾರದ ಮುಖಂಡ ರಾಧಾಕೃಷ್ಣ ವಿವಾದತ್ಮಕ ಹೇಳಿಕೆ
ಪುತ್ತೂರು: ಗೋ ಭಕ್ಷಕರಿಗೆ ರಾಜ್ಯ ಸರಕಾರ ಎರಡೆರಡು ಹಂದಿ ಮರಿಗಳನ್ನು ನೀಡುವ ಇನ್ನೊಂದು ಭಾಗ್ಯವನ್ನು ನೀಡಬೇಕು ಎಂದು ಸಂಘಪರಿವಾರದ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಸರಕಾರಕ್ಕೆ ಮನವಿ ಮಾಡುವ ಮೂಲಕ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಪೆರ್ನೆಯಲ್ಲಿ ಹಟ್ಟಿಯಿಂದ ಗೋವನ್ನು ಕದ್ದು ಮಾಂಸ ಮಾಡಿದ ಘಟನೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮನವಿ ಮಾಡಿದ ಹಿಂದೂ ಮುಖಂಡ ರಾಧಾಕೃಷ್ಣ ಅಡ್ಯಂತಾಯ ರಾಜ್ಯ ಸರಕಾರ ಹಲವು ಭಾಗ್ಯಗಳನ್ನು ನೀಡಿದೆ. ಹೀಗಾಗಿ ಗೋ ಭಕ್ಷಕ ಕುಟುಂಬಗಳಿಗೆ ಎರಡೆರಡು ಹಂದಿ ಮರಿಗಳನ್ನು ನೀಡಬೇಕು, ಆಗ ಅವರು ಕದ್ದು ಗೋವುಗಳನ್ನು ತಿನ್ನುವವರು ಕದಿಯಲು ಮುಂದಾಗುವುದಿಲ್ಲ ಎಂದರು.





