March 13, 2026

ಸೀಟ್ ಬೆಲ್ಟ್ ಹಾಕದೆ ಟ್ರಾಫಿಕ್ ನಿಯಮ ಉಲ್ಲಂಘಿದ ಸಿಎಂ ಸಿದ್ದರಾಮಯ್ಯ: 5,000 ರೂ. ದಂಡ

0
image_editor_output_image914532171-1757142964301.jpg

ಸೀಟ್ ಬೆಲ್ಟ್ ಹಾಕದೆ ಟ್ರಾಫಿಕ್ ನಿಯಮ ಉಲ್ಲಂಘಿದ ಸಿಎಂ ಸಿದ್ದರಾಮಯ್ಯ – ಶೇಕಡ 50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿ

ಬೆಂಗಳೂರು ಸೆಪ್ಟೆಂಬರ್ 06:ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರು 7 ಭಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪ್ರಕರಣ ದಾಖಲಾಗಿದ್ದು, ರಾಜ್ಯಸರಕಾರ ನೀಡಿದ್ದ ಶೇಕಡ 50 ರ ದಂಡ ರಿಯಾಯಿತಿಯನ್ನು ಬಳಸಿಕೊಂಡು ದಂಡ ಪಾವತಿಸಲಾಗಿದೆ.

ಸಿದ್ದರಾಮಯ್ಯ ಬಳಸುವ ಇನೋವಾ ಕ್ರಿಸ್ಟಾ ಕಾರು 2024ರಿಂದ ಈವರೆಗೂ ಏಳು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ. ಈ ಪೈಕಿ ಆರು ಪ್ರಕರಣಗಳು ಸಿಎಂ ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ್ದಾಗಿದೆ. ಶೇ.50ರಷ್ಟು ರಿಯಾಯಿತಿಯ ಅನುಸಾರ ಅವರು 2,500 ರೂಪಾಯಿ ದಂಡ ಪಾವತಿಸಬೇಕಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆದ ಬಳಿಕ ಶುಕ್ರವಾರ ದಂಡ ಪಾವತಿಯಾಗಿದೆ ಎಂದು ಸಂಚಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!