March 13, 2026

ಉಡುಪಿ: ಆನ್‌ಲೈನ್‌ ಟ್ರೇಡಿಂಗ್‌ ಮೋಸ: ನಾಲ್ವರು ಆರೋಪಿಗಳ ಬಂಧನ

0
image_editor_output_image-251078507-1757055817367.jpg

ಉಡುಪಿ: ಆನ್‌ಲೈನ್‌ ಟ್ರೇಡಿಂಗ್‌ ನಡೆಸಿ ಮೋಸ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ 4 ಲ.ರೂ.ವಶಕ್ಕೆ ತೆಗೆದುಕೊಳ್ಳಲಾಗಿದೆ.

ಸುರತ್ಕಲ್‌ನ ಮೊಹಮದ್‌ ಕೈಸ್‌(20), ಹೆಜಮಾಡಿಯ ಅಹಮದ್‌ ಅನ್ವೀಜ್‌(20), ಬಂಟ್ವಾಳದ ಸಫ್ವಾನ್‌(30), ತಾಸೀರ್‌ (31) ಬಂಧಿತರು. ಆರೋಪಿಗಳಿಂದ ಮೊಬೈಲ್‌ ಪೋನ್‌ ಗಳನ್ನು ಹಾಗೂ 4 ಲ.ರೂ.ವಶಪಡಿಸಿಕೊಳ್ಳಲಾಗಿದೆ. ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ.

ಘಟನೆ ವಿವರ: ಶಂಕರಪುರದ ಜೊಸ್ಸಿ ರವೀಂದ್ರ ಡಿ’ಕ್ರೂಸ್‌ ಅವರಿಗೆ ಫೇಸ್‌ ಬುಕ್‌ ಮೂಲಕ ಆರೋಹಿ ಅಗರ್ವಾಲ್‌ ಎಂಬ ಮಹಿಳೆಯ ಪರಿಚಯವಾಗಿದೆ. ಫೆಬ್ರವರಿ ತಿಂಗಳಲ್ಲಿ ಅವಳ ವಾಟ್ಸಾಪ್‌ ಸಂಖ್ಯೆಯಿಂದ ಎಫ್ಎಕ್ಸ್‌ಸಿಎಂ ಗೋಲ್ಡ್‌ ಟ್ರೇಡಿಂಗ್‌ಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂಬ ಸಂದೇಶ ಬಂದಿದೆ. ಅದನ್ನು ನಂಬಿದ ಅವರು ತಮ್ಮ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ ಒಟ್ಟು 75ಲ.ರೂ. ವರ್ಗಾವಣೆ ಮಾಡಿದ್ದಾರೆ. ಅನಂತರ ಮೋಸ ಹೋದ ಅರಿವಾಗಿ ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ಆದೇಶದಂತೆ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸುಧಾಕರ ನಾಯಕ್‌ ಮತ್ತು ಸಹಾಯಕ ಪೊಲೀಸ್‌ ಉಪಾಧೀಕ್ಷಕಿ ಡಾ| ಹರ್ಷ ಪ್ರಿಯಂವದ ನಿರ್ದೇಶನದ ಮೇರೆಗೆ ಸೆನ್‌ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕ ರಾಮಚಂದ್ರ ನಾಯಕ್‌, ಎ.ಎಸ್‌.ಐ. ಉಮೇಶ್‌ ಜೋಗಿ, ಸಿಬಂದಿಗಳಾದ ಪ್ರವೀಣ್‌ ಕುಮಾರ್‌, ಪ್ರವೀಣ ಶೆಟ್ಟಿಗಾರ್‌, ವೆಂಕಟೇಶ್‌, ಧರ್ಮಪ್ಪ, ರಾಘವೇಂದ್ರ, ರಾಜೇಶ್‌, ದೀಕ್ಷಿತ್‌ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಪತ್ತೆಹಚ್ಚಲಾಯಿತು.

Leave a Reply

Your email address will not be published. Required fields are marked *

error: Content is protected !!