ವಿಟ್ಲ: ಭರತನಾಟ್ಯ ಜ್ಯೂನಿಯರ್ ಪರೀಕ್ಷೆ: ಸಮನ್ವಿ ಆರ್ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ
ವಿಟ್ಲ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ನಡೆಸಿದ 2024 25ನೇ ಸಾಲಿನ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಕು. ಸಮನ್ವಿ ಆರ್. ಇವಳು ಶೇಕಡಾ 95.25 ಫಲಿತಾಂಶದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾಳೆ.
ಇವಳು ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸಹ ಶಿಕ್ಷಕರಾಗಿರುವ ಶ್ರೀ ರಮೇಶ್ ಗೇರುಕಟ್ಟೆ ಹಾಗೂ ಯೆನಪೋಯ ಕಾಲೇಜ್ ಆಫ್ ನರ್ಸಿಂಗ್, ನರಿಂಗಾನ ಇಲ್ಲಿ ಉಪನ್ಯಾಸಕಿಯಾಗಿರುವ ಶ್ರೀಮತಿ ಆಶಾಲತಾ ದಂಪತಿಗಳ ಪುತ್ರಿಯಾಗಿದ್ದು, ವಿಟ್ಲದ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.
ಇವಳು ನೃತ್ಯೋಪಾಸನ ಕಲಾ ಅಕಾಡೆಮಿ (ರಿ) ಪುತ್ತೂರು ಇದರ ವಿಟ್ಲ ಶಾಖೆಯ ವಿದ್ಯಾರ್ಥಿನಿಯಾಗಿದ್ದು ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್ ಇವರ ಶಿಷ್ಯೆ.




