ದಿವ್ಯ ಜ್ಯೋತಿ ಕಲಾವಿದರು ಎರುಂಬು: “ಮದಿಮೆದ ಇಲ್ಲಡ್” ತುಳು ನಾಟಕ ಪ್ರದರ್ಶನ
ಕಲಾ ಬದುಕು ಕಲಾವಿದರ ಹೊಟ್ಟೆಪಾಡಿಗಾಗಿ ಮಾತ್ರವೇ ಅಲ್ಲ ಪ್ರೇಕ್ಷಕನ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಇಲ್ಲಿ ಭಾಷೆಯೊಂದೇ ಮುಖ್ಯವಾಗದೆ ಸಂದೇಶಗಳು ಪ್ರಮುಖವಾಗುತ್ತದೆ. ಬಾಲ್ಯದ ಇಂತಹ ಹವ್ಯಾಸ, ಒಡನಾಟಗಳು ಇನ್ನೂ ನಮ್ಮವರು ಎಂಬ ಅನ್ಯೂನ್ಯ ಸಂಬಂಧ ಉಳಿಯುವಂತೆ ಮಾಡಿದೆ ಎಂದು ಉದ್ಯಮಿಗಳಾದ ಸತೀಶ ಆಳ್ವ ಇರಾ ಬಾಳಿಕೆ ಅವರು ವಿಟ್ಲ ಚಂದಳಿಕೆ ಭಾರತ್ ಆಡಿಟೋರಿಯಂ ನಲ್ಲಿ ನಡೆದ “ಮದಿಮೆದ ಇಲ್ಲಡ್” ನಾಟಕ ಆರಂಭದ ಮೊದಲು ನಡೆದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು.ಈ ಸಂಧರ್ಭದಲ್ಲಿ
ಶ್ರೀ ಸಂಜೀವ ಪೂಜಾರಿ, ಅಧ್ಯಕ್ಷರು ಲಯನ್ಸ್ ಕ್ಲಬ್ ವಿಟ್ಲ, ಕಲಾ ಮತ್ತು ಶೈಕ್ಷಣಿಕ ಪೋಷಕರು, ವಿಟ್ಲ.ಶ್ರೀ ಡಿ.ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಹಿರಿಯ ನಾಟಕ ಕಲಾವಿದರು ಮತ್ತು ಸಂಘಟಕರು, ಶ್ರೀ ರಾಧಾಕೃಷ್ಣ ಕುಲಾಲ್ ಎರುಂಬು, ಬರಹಗಾರರು, ಕಲಾವಿದರು, ಸಮಾಜ ಸೇವಕರು ಮತ್ತು ಸಂಘಟಕರು ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಕರುಣಾಕರ ನಾಯ್ತೊಟ್ಟು, ಅಧ್ಯಕ್ಷರು ಪಟ್ಟಣ ಪಂಚಾಯತ್ ವಿಟ್ಲ, ಕಲಾಬಂಧು ಶ್ರೀ ಶ್ರೀಧರ ಶೆಟ್ಟಿ ಗುಬ್ಯ ಉದ್ಯಮಿಗಳು ಮತ್ತು ಕೃಷಿಕರು.
ಶ್ರೀ ಯಚ್. ಸುಬ್ರಮಣ್ಯ ಭಟ್ ನಿವೃತ್ತ ಉಪಪ್ರಾಂಶುಪಾಲರು ವಿಟ್ಲ
ಶ್ರೀ ದಿನಕರ ಭಟ್ ಮಾವೆ ದಂಪತಿಗಳು, ಛೇರ್ಮನ್ ದಿಗ್ವಿಜಯ ಗ್ರೂಪ್ಸ್ ಪ್ರೈ. ಲಿಮಿಟೆಡ್ ವಿಟ್ಲ
ಶ್ರೀ ಸುಭಾಸ್ ನಾಯಕ್ ಮಾಲಕರು ಶ್ರೀನಿವಾಸ ನಾಯಕ್ ಟ್ರೇಡರ್ಸ್ ವಿಟ್ಲ
ಪ್ರಭಾಕರ್ ಶೆಟ್ಟಿ ದಂಬೆಕಾನ.ಕಾಟುಕುಕ್ಕೆ.
ಮಾಲಕರು. ಪ್ರಭಾ ವೈನ್ಸ್ ವಿಟ್ಲ
ಶ್ರೀ ಭಾಸ್ಕರ ಶೆಟ್ಟಿ ಸೂರ್ಯ ಕ್ಯಾಟರರ್ಸ್ ವಿಟ್ಲ
ವಕೀಲರಾದ ಶ್ರೀ ಜಯರಾಮ ರೈ ವಿಟ್ಲ, ಶ್ರೀ ರಾಮದಾಸ್ ಶೆಟ್ಟಿ, ವಿಟಿವಿ ಮೀಡಿಯಾ ವಿಟ್ಲ, ಹಿರಿಯ ಕಲಾವಿದ ಮತ್ತು ಹಾಸ್ಯನಟ ಮಂಗೇಶ್ ಭಟ್ ವಿಟ್ಲ, ಶ್ರೀ ರಾಧಾಕೃಷ್ಣ ಪ್ರಸಾದ್ ಶೆಣೈ ಉಪಸ್ಥಿತರಿದ್ದರು. ಶ್ರೀ ದಿವ್ಯಜ್ಯೋತಿ ಮಿತ್ರ ವೃಂದದ ಗೌರವಾಧ್ಯಕ್ಷ ಮತ್ತು ನಾಟಕ ತಂಡದ ನಿರ್ದೇಶಕ ಮೋಹನದಾಸ ರೈ ಎರುಂಬು ಸ್ವಾಗತಿಸಿ, ಪ್ರಸ್ತಾವನೆ ಗೈದರು.ದಿವ್ಯಜ್ಯೋತಿ ಮಿತ್ರ ವೃಂದದ ಅಧ್ಯಕ್ಷ ರಾಧಾಕೃಷ್ಣಎರುಂಬು ವಂದಿಸಿದರು. ಕಲಾಬಂಧು ಶ್ರೀ ಶ್ರೀಧರ ಶೆಟ್ಟಿ ಗುಬ್ಯ ನಿರೂಪಿಸಿದರು. ಬಳಿಕ “ಮದಿಮೆದ ಇಲ್ಲಡ್” ತುಳು ನಾಟಕ ಪ್ರದರ್ಶನ ಗೊಂಡು ಜನ ಮೆಚ್ಚುಗೆ ಗಳಿಸಿತು. ಸರ್ವರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದುದ್ದಕ್ಕುಮಾಡಿರುವ ಸಮಯಪಾಲನೆ ಪ್ರೇಕ್ಷಕರ ಮನ ಗೆದ್ದಿತ್ತು.




