ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ: 23 ಕೈದಿಗಳ ಎಫ್‌ಐಆರ್ ದಾಖಲು
ರಾಮನಗರ: ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಎರಡು ಗುಂಪುಗಳು ಪರಸ್ಪರ ಬಡಿದಾಡಿಕೊಂಡಿವೆ. ಈ ಹಿನ್ನೆಲೆ ಜಿಲ್ಲಾ ಕಾರಾಗೃಹದ 23 ಕೈದಿಗಳ ಎಫ್‌ಐಆರ್ ದಾಖಲಾಗಿದೆ.
ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರೌಡಿಶೀಟರ್ ಹರ್ಷ ಹಾಗೂ ಮತ್ತೋರ್ವ ರೌಡಿಶೀಟರ್ ದೇವರಾಜು ನಡುವೆ ಹಳೇ ವೈಷಮ್ಯಕ್ಕೆ ಗಲಾಟೆ ಆರಂಭವಾಗಿದೆ. ಜೈಲಿನಲ್ಲಿದ್ದ ಹಲವು ಕೈದಿಗಳು ಎರಡು ಗುಂಪುಗಳಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೂಡಲೇ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಧ್ಯಪ್ರವೇಶ ಮಾಡಿ ಗಲಾಟೆ ನಿಯಂತ್ರಿಸಿ ಕೈದಿಗಳ ಸಮಾಧಾನ ಮಾಡಿದ್ದಾರೆ. ಗಲಾಟೆ ತಡೆಯುವ ವೇಳೆ ಜೈಲು ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಗುಂಪು ಚದುರಿಸಿ ಎರಡೂ ಗುಂಪಿನ ಕೈದಿಗಳನ್ನು ಪ್ರತ್ಯೇಕ ಬ್ಯಾರಾಕ್‌ಗೆ ಕಳುಹಿಸಲಾಗಿದೆ.





