March 18, 2026

40 ಲಕ್ಷ ರೂ. ಲಂಚಕ್ಕೆ ಬೇಡಿಕೆ: ಎಸಿಪಿ ಶರಣಬಸ್ಸಪ್ಪ ಸೇರಿ ಐವರು ಲೋಕಾಯುಕ್ತ ಬಲೆಗೆ

0
image_editor_output_image-633186005-1756533842115.jpg

ಕಲಬುರಗಿ : ನಗರ ಪೊಲೀಸ್ ಆಯುಕ್ತಾಲಯದ ದಕ್ಷಿಣ ಉಪ ವಿಭಾಗದ ಎಸಿಪಿ ಶರಣಬಸ್ಸಪ್ಪ ಸುಬೇದಾ‌ರ್ ಸೇರಿ ಐವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಸಹಾಯಕ ಪೊಲೀಸ್‌ ಆಯುಕ್ಲ ಜತೆಗೆ ಕಚೇರಿಯ ರೈಟರ್ ಚಂದ್ರಕಾಂತ್, ಕಾನ್ಸಟೇಬಲ್ ರಾಘವೇಂದ್ರ, ಇಬ್ಬರು ಖಾಸಗಿ ವ್ಯಕ್ತಿ ದಸ್ತಗೀರ್, ಶಿವಪ್ಪ ಸೇರಿ ಐವರು ಲೋಕಾಯುಕ್ತರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕು ಬಿದ್ದವರು.ಪ್ರಕರಣವೊಂದರ ತನಿಖೆ ಮುಗಿಸುವ ಸಂಬಂಧ4 0 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಾರೆ.ರೇವಣಸಿದ್ದಪ್ಪ ಎಂಬುವರ ಬಳಿ 40 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ಲೋಕಾಯುಕ್ತ ಎಸ್ ಪಿ ಬಿ ಕೆ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಲೋಕಾ ಪೋಲೀಸರು.

Leave a Reply

Your email address will not be published. Required fields are marked *

error: Content is protected !!