February 1, 2026

ವಿಟ್ಲ: ಆ.27 ಮತ್ತು 28ರಂದು ಕಾರ್ತಿಕ್ ಫ್ರೆಂಡ್ಸ್ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ 27ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ

0
image_editor_output_image1238671612-1755961962114

ವಿಟ್ಲ: ಕಾರ್ತಿಕ್‌ ಫ್ರೇಂಡ್ಸ್‌ ಕ್ಲಬ್‌(ರಿ.)ಚಂದಳಿಕೆ ವಿಟ್ಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ಆಶ್ರಯದಲ್ಲಿ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.27-8-2025ನೇ ಬುಧವಾರ ಮತ್ತು 28-8-2025ನೇ ಗುರುವಾರ “ಮಂಗಳಾ ಮಂಟಪ” ಶ್ರೀ ರಾಮನಗರ ಚಂದಳಿಕೆಯಲ್ಲಿ ನಡೆಯಲಿದೆ.

ದಿನಾಂಕ: 27-08-2025ನೇ ಬುಧವಾರ ಪೂರ್ವಾಹ್ನ 8:00ಕ್ಕೆ ಗಣಪತಿ ಹೋಮ, ಬಳಿಕ 9:15ಕ್ಕೆ ಉದಯೇಶ ಕೆದಿಲಾಯರು ಮೂರ್ತಿ ಪ್ರತಿಷ್ಠೆ ನಡೆಸಲಿದ್ದಾರೆ. (ಮೂರ್ತಿ ರಚನೆ ಧನಂಜಯ ವಿಟ್ಲ) ಹರೀಶ್ ಶೆಟ್ಟಿ ಗ್ರಾಮ ಚಾವಡಿ ಕೊಡಂಗಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಹೇಶ್ ಬಿ.ಸಿ.ರೋಡ್ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಬೆಳಿಗ್ಗೆ 11:00ಕ್ಕೆ ಧೂಮಾವತಿ ಸ್ವ-ಸಹಾಯ ಸಂಘ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇವರಿಂದ ಭಜನೆ ನಡೆಯಲಿದೆ. 11-30ರಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
*ಚಿತ್ರಕಲಾ ಸ್ಪರ್ಧೆ (ಶಾಲಾ ಮಕ್ಕಳಿಗೆ)
*ಭಕ್ತಿಗೀತೆ ಸ್ಪರ್ಧೆ (ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ)
*ಸಂಗೀತ ಕುರ್ಚಿ (ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ)
*ಮೂರು ಕಾಲಿನ ಓಟ (ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ)
*ಕಪ್ಪೆ ಜಿಗಿತ (ಅಂಗನವಾಡಿ ಮಕ್ಕಳಿಗೆ)
*ಬಾಲ್ದಿಗೆ ಚೆಂಡು ಹಾಕುವುದು (ಮಹಿಳೆಯರಿಗೆ)
*ತೆಂಗಿನಕಾಯಿ ಸುಲಿಯುವ ಸ್ಪರ್ಧೆ (ಮಹಿಳೆಯರಿಗೆ)
*ಮಡಕೆ ಒಡೆಯುವುದು (ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ)
*ಹಗ್ಗ ಜಗ್ಗಾಟ 300kg + 10kg Level (15 ವರ್ಷ ಕೆಳಗಿನ ಮಕ್ಕಳಿಗೆ)
ಮಹಿಳೆಯರಿಗೆ (ಟೀಂ ರಹಿತ) ಸ್ಥಳದಲ್ಲೇ ಟೀಂ ಆಯ್ಕೆ

ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5:00ರಿಂದ ಶ್ರೀ ಮಹಾದೇವಿ ಮಹಿಳಾ ಭಜನಾ ಮಂಡಳಿ ಕಬಕ ಇವರಿಂದ ಭಜನೆ ನಡೆಯಲಿದೆ.

ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಶಂಕರ ಭಟ್ ಬದನಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ ಅರಮನೆ ಉಪಸ್ಥಿತರಿರುವರು. ವಿಟ್ಲ ಸಿವಿಲ್ ಇಂಜಿನಿಯರ್ ಮಾಲಕರು ಆಕೃತಿ ಕನ್ಸ್‌ಸ್ಪಕ್ಷನ್ ದಿನೇಶ್ ಮಾಡೇಲು, ವಿಟ್ಲ ಉದ್ಯಮಿ ರಮೇಶ್ ವರಪ್ಪಾದೆ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ, ವಿಟ್ಲ ಭಾರತ್ ಅಡಿಟೋರಿಯಂ ಮ್ಹಾಲಕ ಸಂಜೀವ ಪೂಜಾರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಸಂಜೆ 7:00ರಿಂದ ಶ್ರೀ ಶಾರದ ಅಂಧರ ಗೀತ ಗಾಯನ ಕಲಾ ಸಂಘ(ರಿ.) ಮಂಗಳೂರು ಇವರಿಂದ “ಭಕ್ತಿ ರಸಮಂಜರಿ” ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಬಳಿಕ ರಾತ್ರಿ 8:00ರಿಂದ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ: 28-08-2025ನೇ ಗುರುವಾರ ಪೂರ್ವಾಹ್ನ 8-00ಕ್ಕೆ ಗಣಪತಿ ಹೋಮ ಬಳಿಕ 8-30ಕ್ಕೆ ಬೆಳಗಿನ ಪೂಜೆ ನಡೆದು 9-00ಕ್ಕೆ ವಿಶ್ವನಾಥ ದೇವಾಡಿಗ ಮತ್ತು ಬಳಗ ವಿಟ್ಲ ಇವರಿಂದ ಭಜನೆ ನಡೆಯಲಿದೆ. 10-30ಕ್ಕೆ ಹಗ್ಗಜಗ್ಗಾಟ ಸ್ಪರ್ಧೆ (ಸಾರ್ವಜನಿಕರಿಗೆ 7 ಜನರ ತಂಡ) ನಡೆಯಲಿದೆ.

ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆದು ಸಂಜೆ 3-00ಕ್ಕೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಸಂಜೆ 5-00ಕ್ಕೆ ಗಣಪತಿಯ ಭವ್ಯ ಅಲಂಕೃತವಾದ ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆವಾಗಿ ಚಲಿಸುವ ರಸಮಂಜರಿ ಮೆರುಗು ನೀಡಲಿದೆ.

Leave a Reply

Your email address will not be published. Required fields are marked *

error: Content is protected !!