ಉಡುಪಿ: ಅತಿಥಿ ಉಪನ್ಯಾಸಕ ನೇಣು ಬಿಗಿದು ಆತ್ಮಹತ್ಯೆ
ಉಡುಪಿ: ಅತಿಥಿ ಉಪನ್ಯಾಸಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಶ್ರೀಹರ್ಷ ಶಾನುಭೋಗ್ (40) ಮೃತ ಅತಿಥಿ ಉಪನ್ಯಾಸಕ.
ಶ್ರೀಹರ್ಷ ಶಾನುಭೋಗ್ ಉಡುಪಿಯ ಕುಂಜುಬೆಟ್ಟುವಿನಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ಬರುವ ಸಂಬಳದಲ್ಲಿ ಜೀವನ ನಿರ್ವಹಣೆ ಮಾಡಲಾಗದೇ ತೀವ್ರ ಸಂಕಷ್ಟದಲ್ಲಿದ್ದರು ಎನ್ನಲಾಗಿದೆ.
ಆರ್ಥಿಕ ಸಮಸ್ಯೆಯಿಂದ ತೀವ್ರ ಖಿನ್ನತೆಗೊಳಗಾಗಿದ್ದ ಶ್ರೀಹರ್ಷ ಶಾನುಭೋಗ್ ಉಡುಪಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.





