ಪ್ರೇಯಸಿಗಾಗಿ ಪತ್ನಿಯನ್ನೇ ಹತ್ಯೆಗೈದ ಬಿಜೆಪಿ ಮುಖಂಡ
ಜೈಪುರ: ಇಲ್ಲಿನ ಬಿಜೆಪಿ ನಾಯಕನೊಬ್ಬ ಪ್ರೇಯಸಿಯ ಒತ್ತಡಕ್ಕೆ ಮಣಿದು ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ.
ಪತಿ ರೋಹಿತ್ ಸೈನಿ, ಆತನ ಪ್ರೇಯಸಿ ರಿತು ಬಂಧಿತ ಆರೋಪಿಗಳು. ಆ.10ರಂದು ರೋಹಿತ್ ಸೈನಿ ಪತ್ನಿ ಸಂಜು ಸೈನಿ ಅನುಮಾನಾಸ್ಪವಾಗಿ ಶವವಾಗಿ ಪತ್ತೆಯಾಗಿದ್ದರು.
ಮೊದಲಿಗೆ ಆರೋಪಿ ರೋಹಿತ್, ದರೋಡೆಕೋರರು ಮನೆಗೆ ನುಗ್ಗಿ ತನ್ನ ಪತ್ನಿಯನ್ನು ಕೊಂದು ಬೆಲೆಬಾಳುವ ವಸ್ತುಗಳೊಂದಿಗೆ ದೋಚಿ ಪರಾರಿಯಾಗಿದ್ದಾರೆ ಕಥೆ ಕಟ್ಟಿದ್ದ. ಆರೋಪಿಯ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಕೊಲೆಯ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ರೋಹಿತ್ ಮದುವೆಯಾಗಿದ್ದರೂ ರಿತು ಎಂಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಇವರಿಬ್ಬರ ಸಂಬಂಧಕ್ಕೆ ಪತ್ನಿ ಸಂಜು ಅಡ್ಡಿಯಾಗಿದ್ದಳು. ಹೀಗಾಗಿ ಪ್ರೇಯಸಿ ರಿತು ನಿನ್ನ ಪತ್ನಿ ಸಂಜುವನ್ನು ನಮ್ಮ ದಾರಿಯಿಂದ ತೆಗೆದು ಹಾಕು ಎಂದಿದ್ದಳು.
ಪ್ರೇಯಸಿಯ ಒತ್ತಡಕ್ಕೆ ಮಣಿದು ರೋಹಿತ್, ಪತ್ನಿಯನ್ನೇ ಹತ್ಯೆಗೈದಿದ್ದ. ಬಳಿಕ ದರೋಡೆಕೋರರು ಮನೆಗೆ ನುಗ್ಗಿ ಚಿನ್ನಾಭರಣ ದೋಚಿ, ಪತ್ನಿಯನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿ ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸಿದ್ದರು.
ಆರೋಪಿ ರೋಹಿತ್‌ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಕೊಲೆ ರಹಸ್ಯವನ್ನು ಬಾಯಿಬಿಟ್ಟಿದ್ದಾನೆ. ಇದೀಗ ಪೊಲೀಸರು ಆರೋಪಿ ರೋಹಿತ್ ಸೈನಿ ಹಾಗೂ ಆತನ ಪ್ರೇಯಸಿ ರಿತುಳನ್ನು ಬಂಧಿಸಿದ್ದಾರೆ.




