ಬಿ. ಸಿ.ರೋಡ್: ಎಸ್ಡಿಪಿಐ ವತಿಯಿಂದ “ತಿರಂಗಾ ರ್‍ಯಾಲಿ”
ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಶುಕ್ರವಾರ ಬಿ.ಸಿ.ರೋಡ್ ನಲ್ಲಿ ಭಯ ಮತ್ತು ಹಸಿವು ಮುಕ್ತ ಸ್ವಾತಂತ್ರ್ಯಕ್ಕಾಗಿ ತಿರಂಗಾ ರ್‍ಯಾಲಿ ನಡೆಯಿತು.
ಮಧ್ಯಾಹ್ನ 3:30 ಕ್ಕೆ ಬಿ.ಸಿ.ರೋಡ್ ನ ಮುಖ್ಯ ವೃತ್ತದ ಬಳಿಯಿಂದ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ರ್‍ಯಾಲಿಗೆ ಚಾಲನೆ ನೀಡಿದರು. ರ್‍ಯಾಲಿಯಲ್ಲಿ ಪಕ್ಷದ ಕಾರ್ಯಕರ್ತರು, ಮಕ್ಕಳು, ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು. ರ್‍ಯಾಲಿಯು ಕೈಕಂಬದಲ್ಲಿ ಸಮಾವೇಶಗೊಂಡು
ಸಭಾ ಕಾರ್ಯಕ್ರಮ ನಡೆಯಿತು. ಬ್ಯಾಂಡ್ ಮೇಳ, ಪುಟಾಣಿ ಮಕ್ಕಳ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಸೈನಿಕರ ವೇಷಭೂಷಣಗಳು ಹಾಗೂ ದಫ್ಫ್ ರ್‍ಯಾಲಿಯ ವಿಶೇಷ ಆಕರ್ಷಣೆಯಾಗಿತ್ತು.


