February 2, 2026

ಕನ್ಯಾನ: ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ SYS ಕನ್ಯಾನ ಸರ್ಕಲ್ ವತಿಯಿಂದ ಸ್ವತಂತ್ರ ಸಂಜೆ ಸೌಹಾರ್ದ ಸಂಗಮ

0
image_editor_output_image1117706548-1755350435006

79 ನೇ ಸ್ವಾತಂತ್ರೋತ್ಸವದ ಅಂಗವಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ SYS  ಕನ್ಯಾನ ಸರ್ಕಲ್ ವತಿಯಿಂದ ಕನ್ಯಾನ ಮಂಟಮೆ ಸಭಾಂಗಣದಲ್ಲಿ ಸ್ವತಂತ್ರ ಸಂಜೆ ಮತ್ತು ಸೌಹಾರ್ದ ಸಂಗಮ ನಡೆಯಿತು.

ಅಧ್ಯಕ್ಷತೆಯನ್ನು KMJ ಕನ್ಯಾನ ಸರ್ಕಲ್ ಅಧ್ಯಕ್ಷರಾದ ಶರೀಫ್ ಸ ಅದಿ ಕರೋಪಾಡಿ ವಹಿಸಿದರು. KMJ ದ.ಕ ಈಷ್ಟ್ ವಿಭಾಗ ದ ಅ್ ವಾ ಕಾರ್ಯದರ್ಶಿ  ಅಬ್ದುಲ್ ಹಮೀದ್ ಸಖಾಫಿ ಪಾಡಿ ದುವಾ ಮೂಲಕ ಚಾಲನೆ ನೀಡಿದರು.

ಕೆ ಸಿ ಎಫ್ ಕಾರ್ಯಕರ್ತ ಬರಹಗಾರ ಮುಹಮ್ಮದ್ ಅಲಿ ಬಂಡಿತಡ್ಕ ಉದ್ಘಾಟಿಸಿದರು.ಕೆ ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಪ್ರಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಅಧ್ಯಾಪಕರಾದ ವಿಶ್ವನಾಥ್ ಮಾಸ್ಟ್ರು,ಸುಬ್ಬಣ್ಣ ಭಟ್ ಮಾಸ್ಟ್ರು ಅಬೂಬಕ್ಕರ್ ಮಾಸ್ಟ್ರು ಇವರನ್ನು ಗೌರವಾರ್ಪನೆ ನೀಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ KMJ ಕೋಶಾಧಿಕಾರಿ ಸುಲೈಮಾನ್ ನ್ ಸಖಾಫಿ ಅಂಗ್ರಿ SYS ಕಾರ್ಯದರ್ಶಿ ಲತೀಫ್ ಬಾಳೆಕೋಡಿ ಅಬ್ದುಲ್ ಖಾದರ್ ಸ ಅದಿ ಮತ್ತಿತರು ಉಪಸ್ಥಿತರಿದ್ದರು. ಕೆ.ಎಂ ಅಶ್ರಫ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!