February 2, 2026

ಕಂಬಳಬೆಟ್ಟು: ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

0
image_editor_output_image1729287671-1755248603967

ವಿಟ್ಲ: ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ  ದೇಶಭಕ್ತಿಯ ಉತ್ಸಾಹದಿಂದ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸಿದ್ಧ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ           ಡಾ. ಫಾತಿಮಾ ಇಸ್ಮತ್ ಧ್ವಜಾರೋಹಣ ಮಾಡಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು

ಕಾರ್ಯಕ್ರಮದಲ್ಲಿ ಜನಪ್ರಿಯ ಸೆಂಟ್ರಲ್ ಶಾಲೆಯ ನಿರ್ದೇಶಕರಾದ ಶ್ರೀ ನೌಶೀನ್ ಬದ್ರಿಯಾ, ಪ್ರಾಂಶುಪಾಲರಾದ ಶ್ರೀ ಲಿಬಿನ್ ಕ್ಸೇವಿಯರ್ ಮತ್ತು ಆಡಳಿತಾಧಿಕಾರಿಗಳಾದ ಶ್ರೀ ಸಫ್ವಾನ್ ಪಿಲಿಕಲ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಫ್ಯಾನ್ಸಿ ಡ್ರೆಸ್, ನೃತ್ಯ, ಭಾಷಣ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮವನ್ನು 6ನೇ ತರಗತಿಯ ಆಯಿಷಾ ಮಿಫ್ರಾ ಸ್ವಾಗತಿಸಿದರು. 7ನೇ ತರಗತಿಯ ಜೋಯಾ ನಫೀಸಾ ಮತ್ತು ರಿದಾ ಫಾತಿಮಾ ನಿರೂಪಕರಾಗಿ ಕಾರ್ಯನಿರ್ವಹಿಸಿದರು.
5ನೇ ತರಗತಿಯ ಮರಿಯಂ ಸಫಾ ವಂದಿಸಿದರು.

ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ಹೆಮ್ಮೆ ಮೂಡಿಸುವಂತಾಯಿತು.

Leave a Reply

Your email address will not be published. Required fields are marked *

error: Content is protected !!