ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ: ತಂದೆ-ಮಗ ಸೇರಿ ಮೂವರು ಮೃತ್ಯು
ದಾವಣಗೆರೆ: ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಹೊನ್ನಾಳಿ ತಾಲೂಕಿನ ತಕ್ಕನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಒಂದೇ ಬೈಕಿನಲ್ಲಿದ್ದ ಕೋಟೆಹಾಳ್ ಗ್ರಾಮದ ತಂದೆ ಮಹೆಶಪ್ಪ, ಮಗ ಸಂಜು ಸಾವನ್ನಪ್ಪಿದ್ದಾರೆ. ಹಾಗೆಯೇ ಮತ್ತೊಂದು ಬೈಕಿನಲ್ಲಿದ್ದ ಪ್ರಶಾಂತ್ ಎಂಬವರು ಕೂಡ ಮೃತಪಟ್ಟಿದ್ದಾನೆ.
ಆನಂದ್ ಅವರ ಸ್ಥಿತಿ ಗಂಭೀರಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಶಾಂತ್ ಮತ್ತು ಆನಂದ್ ದಿಡಗೂರು ಗ್ರಾಮದವರು ಎಂದು ಗುರುತಿಸಲಾಗಿದೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





