March 18, 2026

ಧರ್ಮಸ್ಥಳ ಪ್ರಕರಣ: ಎಸ್ಐಟಿಗೆ ಸಂಪೂರ್ಣ ಪೊಲೀಸ್ ಠಾಣೆ ಅಧಿಕಾರ ನೀಡಿದ ರಾಜ್ಯ ಸರಕಾರ

0
image_editor_output_image-1035371974-1754722887787.jpg

ಬೆಳ್ತಂಗಡಿ: ಧರ್ಮಸ್ಥಳದ ಶವ ಹೂತ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡಕ್ಕೆ ರಾಜ್ಯ ಸರಕಾರ ಸಂಪೂರ್ಣ ಅಧಿಕಾರ ನೀಡಿದ್ದು,ಎಸ್ ಐಟಿಯನ್ನು ಪೊಲೀಸ್ ಠಾಣೆ ಎಂದು ಘೋಷಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಆರೋಪದಡಿ ತನಿಖೆಗೆ ರಚನೆಯಾಗಿದ್ದ ಎಸ್ಐಟಿಗೆ ಪೊಲೀಸ್ ಠಾಣೆ ಮಾನ್ಯತೆಯನ್ನ ಸರ್ಕಾರ ನೀಡಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಕಲಂ 2 (1)(ಯು) ಅಡಿಯಲ್ಲಿ ನೀಡಿರುವ ಅಧಿಕಾರವನ್ನು ಚಲಾಯಿಸಿದ ಸರ್ಕಾರದ ಆದೇಶದಂತೆ 2025 ಜುಲೈ 19 ರಂದು ರಚನೆ ಮಾಡಲಾದ ಎಸ್ಐಟಿಯನ್ನು ಪೊಲೀಸ್ ಠಾಣೆ ಎಂದು ಅನೌನ್ಸ್ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!