September 22, 2026

ಮಂಗಳೂರು:ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ

0
image_editor_output_image-1162493954-1754025317932.jpg

ಮಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಆರೋಪಿಯನ್ನು ಸಜಿಪ ನಡು ಗ್ರಾಮದ ಬಸ್ತಿಗುಡ್ಡೆ ಮನೆಯ ಮನ್ಸೂರ್ ಯಾನೆ ಮುಹಮ್ಮದ್ ಮನ್ಸೂರ್ ಯಾನೆ ಜಾಬೀರ್ ಎಂದು ಗುರುತಿಸಲಾಗಿದೆ.

2023ರ ಮೇ 30ರಂದು ಬಾಲಕಿಯನ್ನು ಆರೋಪಿಯು ಬೆದರಿಸಿ ಅತ್ಯಾಚಾರಗೈದು ವಿಡಿಯೋ ಮಾಡಿದ್ದ. ಈ ಬಗ್ಗೆ ಬಾಲಕಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ 2023ರ ಡಿಸೆಂಬರ್ 23ರಂದು ಪ್ರಕರಣ ದಾಖಲಾಗಿತ್ತು.

 

ಬಾಲಕಿ ದೂರು ನೀಡಿದೊಡನೆ ಆರೋಪಿಯು 8 ತಿಂಗಳ ಕಾಲ ತಲೆಮರೆಸಿಕೊಂಡಿದ್ದ. 2024ರ ಜುಲೈ 2ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್ ಗುರುರಾಜ್ ಭಾಗಶಃ ತನಿಖೆ ಪೂರ್ಣಗೊಳಿಸಿದ್ದು, ಮುಂದಿನ ತನಿಖೆಯನ್ನು ಇನ್‌ಸ್ಪೆಕ್ಟರ್ ರಾಜೆಂದ್ರ ಬಿ. ನಡೆಸಿ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶ ಮಾನು ಕೆ.ಎಸ್. ಅವರು ಬುಧವಾರ ಆರೋಪಿಗೆ ಅತ್ಯಾಚಾರದ ಆರೋಪದಡಿ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ಹಾಗೂ ಬೆದರಿಸಿದ್ದಕ್ಕಾಗಿ 5,000 ರೂ.ದಂಡ ಮತ್ತು 1 ವರ್ಷ ಶಿಕ್ಷೆಯನ್ನು ವಿಧಿಸಿದ್ದಾರೆ. ಸರಕಾರ ಪರವಾಗಿ ಅಭಿಯೋಜಕ ಬದ್ರಿನಾಥ ಮತ್ತು ವಿಶೇಷ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!