ಬಂಟ್ವಾಳ: ಕುದ್ರೆಬೆಟ್ಟು ಎಂಬಲ್ಲಿ ಬೈಕ್ ಅಪಘಾತ: ತುಂಬೆಯ ಸವಾರರಿಬ್ಬರು ಗಂಭೀರ
ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಬೈಕ್ ಅಪಘಾತ ಸಂಭವಿಸಿ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ತುಂಬೆ ನಿವಾಸಿ ಅಜಿತ್ ಹಾಗೂ ಆತನ ಸಹ ಸವಾರ ಸ್ನೇಹಿತ ಗಾಯಗೊಂಡವರಾಗಿದ್ದಾರೆ. ಇವರು ದಾಸಕೋಡಿ ಸಂಬಂಧಿಕರ ಮನೆಗೆ ಹೋಗಿ ವಾಪಾಸು ತುಂಬೆಗೆ ಬರುತ್ತಿದ್ದ ವೇಳೆ ಅಪ*ಘಾತ ಸಂಭವಿಸಿದೆ.
ಕುದ್ರೆಬೆಟ್ಟು ಎಂಬಲ್ಲಿನ ಕಾಂಕ್ರೀಟ್ ರಸ್ತೆಯಲ್ಲಿ ನೀರು ತುಂಬಿ ಚಾಲಕರು ನಿಯಂತ್ರಣ ಕಳೆದುಕೊಂಡು ಅಪಘಾತಗಳು ಸಂಭವಿಸುತ್ತಿತ್ತು.





