September 22, 2026

ಬಂಟ್ವಾಳ: ಹಿರಿಯ ರಂಗಭೂಮಿ ಕಲಾವಿದ ಚಿತ್ರನಟ ಚಿ.ರಮೇಶ್ ಕಲ್ಲಡ್ಕ ನಿಧನ

0
image_editor_output_image-102347086-1753259252560.jpg

ಬಂಟ್ವಾಳ: ತುಳು ರಂಗಭೂಮಿಯ ಹಿರಿಯ ಕಲಾವಿದ ಚಿತ್ರನಟ ಚಿ. ರಮೇಶ್ ಕಲ್ಲಡ್ಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂರು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಗೆ ಮೀಸಲಿಟ್ಟ ರಮೇಶ್ ಕಲ್ಲಡ್ಕ, ಕಳೆದ 20 ವರ್ಷಗಳಿಂದ ವಿಜಯಕುಮಾರ್ ಕೊಡಿಯಾಲ್‌ಬೈಲ್ ನೇತೃತ್ವದ ಕಲಾಸಂಗಮ ತಂಡದಲ್ಲಿ ಅಭಿನಯ ಮಾಡುತ್ತಿದ್ದರು.

 

ಕೊಡಿಯಾಲ್‌ಬೈಲ್ ಅವರಿಂದ ತರಬೇತಿ ಪಡೆದ ರಮೇಶ್ ವಿವಿಧ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದರು. ‘ಶಿವಧೂತಗುಳಿಗ ರೂಪಕ ನಾಟಕದಲ್ಲಿ ಭೀಮರಾವ್ ಪಾತ್ರವು ಅವರಿಗೆ ವ್ಯಾಪಕ ಮನ್ನಣೆಯನ್ನು ತಂದುಕೊಟ್ಟಿತು. ಶಿಸ್ತು ಮತ್ತು ಸೌಮ್ಯ ಸ್ವಭಾವಕ್ಕೆ ಹೆಸರುವಾಸಿಯಾದ ರಮೇಶ್ ಕಲಾಸಂಗಮದ ಅತ್ಯಂತ ಹಿರಿಯ ಮತ್ತು ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿದ್ದರು

Leave a Reply

Your email address will not be published. Required fields are marked *

You may have missed

error: Content is protected !!