March 13, 2026

ಬೈಂದೂರು: ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳವು: ನಾಲ್ವರು ಆರೋಪಿಗಳ ಬಂಧನ

0
image_editor_output_image-954033392-1753177041376.jpg

ಬೈಂದೂರು: ಬೈಂದೂರಿನ ಯಡ್ತರೆ ಗ್ರಾಮದ ಹಡಿನಗದ್ದೆ ಎಂಬಲ್ಲಿ ಎರಡು ತಿಂಗಳ ಹಿಂದೆ ನಡೆದ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದ.ಕ. ಜಿಲ್ಲೆಯ ಕಡಬ ತಾಲೂಕಿನ ಬಾಳ್ತಿಲ ಗ್ರಾಮ ನೂಜಿ ಮಾವಿನಕಟ್ಟೆಯ ಸಂತೋಷ(35), ಭಟ್ಕಳ ಗುಳ್ಳಿ ನಿವಾಸಿಗಳಾದ ಧಾರವಾಡ ಮೂಲದ ಶಾನೂರು ಬಾಬುಲಾಲ್ ನವಾಜ್(31), ಸ್ವಾಜಾ ಮಹಮ್ಮದ್(26), ಸಾಧಿಕ್(27)ರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ಕಳವು ಮಾಡಿದ 455 ಕೆ.ಜಿ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಡಿನಗದ್ದೆಯ ಮಸೂದ್ ಪಟೇಲ್‌ ಎಂಬವರು ತನ್ನ ತೋಟದಲ್ಲಿ ಬೆಳೆದ ಸುಮಾರು 200 ಚೀಲ ಒಣಗಿಸಿದ ಸಿಪ್ಪೆಅಡಿಕೆಯನ್ನು ಗೋಡೌನ್‌ನಲ್ಲಿ ಇಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!