ಬೆಳ್ತಂಗಡಿ: ತನ್ನ ಪುತ್ರಿ ಜತೆ ಮಹಿಳೆ ನಾಪತ್ತೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವೇಣೂರು ಪೆರಾಡಿ ಗ್ರಾಮದ ಆಯಿಷಾ ಮಂಜಿಲ್ ನಿವಾಸಿ ತಾಜುದ್ದೀನ್ ಶೇಖ್ ಅವರ ಪತ್ನಿ ಜುಬೈದಾ ಶೇಖ್ (34.ವ) ಹಾಗೂ ಪುತ್ರಿ ಆಯಿಸಾ ಅಸ್ಮಿಯಾ (7.ವ) ನಾಪತ್ತೆಯಾಗಿದ್ದಾರೆ.
ವಿದೇಶದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ತಾಜುದ್ದೀನ್ ಶೇಖ್ ರವರ ಪತ್ನಿ ಜುಬೈದಾ ಶೇಖ್ ರವರು ತಮ್ಮ ಮೂವರು ಮಕ್ಕಳೊಂದಿಗೆ ಪೆರಾಡಿಯಲ್ಲಿ ವಾಸವಾಗಿದ್ದರು.
ಡಿ. 18ರಂದು ರಾತ್ರಿ ಮೂವರು ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದ ಜುಬೈದಾ ಶೇಖ್ ಹಾಗೂ ಪುತ್ರಿ ಆಯಿಸಾ ಅಸ್ಮಿಯಾ ರವರು ಮರುದಿನ ಬೆಳಗ್ಗೆ ಎದ್ದು ನೋಡಿದ ಸಂದರ್ಭದಲ್ಲಿ ಮನೆಯಿಂದ ನಾಪತ್ತೆಯಾಗಿದ್ದರು.





