March 13, 2026

ವಿಟ್ಲ: ಆ. 3ರಂದು ದಕ್ಷಿಣ ಕನ್ನಡ ನೃತ್ಯ ಕಲಾವಿದರ ಒಕ್ಕೂಟದ ವಾರ್ಷಿಕೋತ್ಸವ, ಕ್ರೀಡೋತ್ಸವ ಸಂಭ್ರಮ 2025-26

0
image_editor_output_image862908882-1752831328248.jpg

ವಿಟ್ಲ: ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ನೃತ್ಯ ಕಲಾವಿದರ ಒಕ್ಕೂಟವನ್ನು ಸ್ಥಾಪಿಸಲಾಗಿದ್ದು, ವಾರ್ಷಿಕೋತ್ಸವ, ಕ್ರೀಡೋತ್ಸವ ಸಂಭ್ರಮ 2025-26 ಆ.3ರಂದು ವಿಠ್ಠಲ್ ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯ ಪೇವಿಲಿಯನ್ ಹಾಲ್ ನಲ್ಲಿ ನಡೆಯಲಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ರಾಜೇಶ್ ವಿಟ್ಲ ಹೇಳಿದರು.

ಕಲಾವಿದರನ್ನು ಸಮಾಜ ಗುರುತಿಸಿದರೂ, ಕಷ್ಟಗಳಿಗೆ ಸ್ಪಂದಿಸುವವರು ಇರುವುದಿಲ್ಲ. 36 ಮಂದಿ ನೃತ್ಯ ತರಬೇತುದಾರರು ಸಂಘದಲ್ಲಿದ್ದಾರೆ. ಎಲ್ಲರೂ ಒಟ್ಟಿನಿಂದ ಇದ್ದು, ಸರ್ಕಾರದ ಸವಲತ್ತುಗಳನ್ನು ತರಿಸಿಕೊಳ್ಳುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಒಕ್ಕೂಟದ ಅಧ್ಯಕ್ಷ ಚಂದ್ರೋದಯ ಕುಲಾಲ್ ಮಾತನಾಡಿ ಕಲಾವಿದರ ಭವಿಷ್ಯದ ಚಿಂತನೆಯನ್ನಿಟ್ಟಕೊಂಡು ವಿಮೆ ಮಾಡುವ ಚಿಂತನೆಯಿದೆ. ಬೆಳಗ್ಗೆ 9ಗಂಟೆಗೆ ಉದ್ಘಾಟನೆಯನ್ನು ಕೃಷ್ಣಯ್ಯ ಕೆ. ವಿಟ್ಲ ನಡೆಸಲಿದ್ದು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಸೇರಿ ಗಣ್ಯರು ಭಾಗವಹಿಸಲಿದ್ದಾರೆ. 2.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಜಿ. ವಿ. ಗೌರವಾಧ್ಯಕ್ಷ ಅಜಿತ್ ಶೆಟ್ಟಿ ಅಮೈ ವಹಿಸಲಿದ್ದಾರೆ ಎಂದು ತಿಳಿಸಿದರು.

ಉಪಾಧ್ಯಕ್ಷ ಕಿರಣ್ ಮುರಳಿ, ಕಾರ್ಯದರ್ಶಿ ಮೋಹನ್ ಎಸ್., ಜತೆಕಾರ್ಯದರ್ಶಿ ಮಹೇಶ್ ಕುಲಾಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!