ಇಂದು ಸಂಜೆ (ಜುಲೈ 18) ಬಂಟ್ವಾಳ ಜಮೀಯ್ಯತುಲ್ ಫಲಾಹ್ ನ ನೂತನ ಕಛೇರಿ, ವಿದ್ಯಾರ್ಥಿ ಮಾಹಿತಿ ಮತ್ತು ಸಮಾಲೋಚನಾ ಕೇಂದ್ರದ ಉದ್ಘಾಟನೆ
ಬಂಟ್ವಾಳ : ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ನೂತನ ಕಛೇರಿ, ವಿದ್ಯಾರ್ಥಿ ಮಾಹಿತಿ ಮತ್ತು ಸಮಾಲೋಚನಾ ಕೇಂದ್ರದ ಉದ್ಘಾಟನಾ ಸಮಾರಂಭವು ಶುಕ್ರವಾರ (ಇಂದು) ಸಂಜೆ 4 ಕ್ಕೆ ಮೆಲ್ಕಾರ್ ನ ಗೋಲ್ಡನ್ ಸಿಟಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ಜಮೀಯ್ಯತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಕೆ.ಕೆ.ಸಾಹುಲ್ ಹಮೀದ್ ಉದ್ಘಾಟಿಸಲಿದ್ದು, ಬಂಟ್ವಾಳ ತಾಲೂಕು ಅಧ್ಯಕ್ಷ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸುವರು.
ಜಮೀಯ್ಯತುಲ್ ಫಲಾಹ್ ನ ಮಾಜಿ ಅಮೀರ್, ಎನ್ನಾರ್ಸಿಸಿ ಜಿದ್ದಾ ಪ್ರತಿನಿಧಿ ಮೊಹಮ್ಮದ್ ಮನ್ಸೂರ್ ನಾಮಫಲಕ ಅನಾವರಣ ಗೊಳಿಸುವರು, ಜುಬೈಲ್ ಘಟಕದ ಅಧ್ಯಕ್ಷ, ಎನ್ನಾರ್ಸಿಸಿ ಮಾಜಿ ಅಮೀರ್ ಫಾರೂಕ್ ಫೋರ್ಟ್ ವೇ ಕಾನ್ಫರೆನ್ಸ್ ಕೊಠಡಿ ಉದ್ಘಾಟಿಸುವರು, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಅರ್ಜುನ್ ಭಂಡಾರ್ಕರ್ ಚೈತನ್ಯ ಸಂಚಿಕೆ ಬಿಡುಗಡೆಗೊಳಿಸುವರು.
ಜಮೀಯ್ಯತುಲ್ ದ.ಕ.ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್, ಅಜೀವ ಸದಸ್ಯ ಉಮ್ಮರ್ ಹಾಜಿ ರಾಜ್ ಕಮಲ್, ಪೂರ್ವಾದ್ಯಕ್ಷರು, ಸ್ಥಳದಾನಿಗಳಾದ ಹಾಜಿ ಮೊಹಮ್ಮದ್ ಹನೀಫ್ ಗೋಳ್ತಮಜಲು, ಮೊಹಮ್ಮದ್ ರಫೀಕ್ ಹಾಜಿ ಆಲಡ್ಕ ಮತ್ತು ಕೋಶಾಧಿಕಾರಿ ಎಂ.ಎಚ್.ಇಕ್ಬಾಲ್ ಮೆಲ್ಕಾರ್ ಅತಿಥಿಗಳಾಗಿ ಭಾಗವಹಿಸುವರು ಎಂದು ಜಮೀಯ್ಯತುಲ್ ಫಲಾಹ್ ಪ್ರಕಟಣೆ ತಿಳಿಸಿದೆ.





