ಗಂಗೊಳ್ಳಿ: ದೋಣಿ ಮಗುಚಿ ನಾಪತ್ತೆಯಾಗಿದ್ದ ಮೂವರು ಮೀನುಗಾರರಲ್ಲಿ ಓರ್ವನ ಮೃತದೇಹ ಪತ್ತೆ
ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಮೀನುಗಾರಿಕೆಗೆ ತೇರಳಿದ್ದ ವೇಳೆ ಗಾಳಿಗೆ ಸಿಲುಕಿ ದೋಣಿ ಮಗುಚಿ ನಾಪತ್ತೆಯಾಗಿದ್ದ ಮೂವರು ಮೀನುಗಾರರಲ್ಲಿ ಓರ್ವನ ಮೃತದೇಹ ಇಂದು ಪತ್ತೆಯಾಗಿದೆ.
ಲೋಹಿತ್ ಖಾರ್ವಿ (39) ಅವರ ಶವವನ್ನು ಬೆಳಗಿನ ಜಾವ 4.30 ರ ವೇಳೆಗೆ ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ತಂಡ ಕೊಡಿ ಕಡಲ ತೀರದಲ್ಲಿ ಪತ್ತೆ ಹಚ್ಚಿದ್ದಾರೆ.
ಗಂಗೊಳ್ಳಿಯ ಹಳೆ ಅಳಿವೆ ಪ್ರದೇಶದಲ್ಲಿ ಮಂಗಳವಾರ ತೂಫಾನ್‌ಗೆ ಸಿಲುಕಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ಸಿಪಾಯಿ ಸುರೇಶ್ ಖಾರ್ವಿ (48), ಜಗನ್ನಾಥ್ ಖಾರ್ವಿ (50) ಮತ್ತು ಲೋಹಿತ್ ಖಾರ್ವಿ (39) ನೀರು ಪಾಲಾಗಿದ್ದರು. ಮಂಗಳವಾರ ಬೆಳಗ್ಗೆ ನಡೆದ ಈ ದುರಂತದಲ್ಲಿ ದೋಣಿಯಲ್ಲಿದ್ದ ಮಲ್ಯಾರಬೆಟ್ಟಿನ ಸಂತೋಷ ಖಾರ್ವಿ ಅವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರು.
ಇದೀಗ ಓರ್ವನ ಮೃತದೇಹ ಪತ್ತೆಯಾಗಿದ್ದು, ಸಿಪಾಯಿ ಸುರೇಶ್ ಖಾರ್ವಿ (48), ಜಗನ್ನಾಥ್ ಖಾರ್ವಿ (50) ನೀರುಪಾಲಾಗಿದ್ದು, ಹುಡುಕಾಟ ನಡೆಯುತ್ತಿದೆ. ಸತತ ಮಳೆ, ಗಾಳಿ, ಸಮುದ್ರದ ಅಬ್ಬರ ಕಾರ್ಯಾಚರಣೆಗೆ ಅಡ್ಡಿಯಾದರು ಹುಡುಕಾಟ ನಡೆಸಲಾಗುತ್ತಿದೆ.





