ಸುರತ್ಕಲ್: ಉದ್ಯಮಿಗೆ ತೇಜೋವಧೆ ಮಾಡುತ್ತಿದ್ದ ಆರೋಪಿಯ ಬಂಧನ
ಸುರತ್ಕಲ್: ಉದ್ಯಮಿಯೊಬ್ಬರ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಮಾಹಿತಿ ಹಂಚಿಕೊಂಡು ತೇಜೋವಧೆ ಮಾಡುತ್ತಿದ್ದ ಆರೋಪಿ ಕುಳಾಯಿ ರಾಮ್‌ಪ್ರಸಾದ್ ಯಾನೇ ಪೋಚ (42) ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೋರ್ವ ಆರೋಪಿ ಲೋಕೇಶ್ ಕೋಡಿಕೆರೆ ಎಂಬಾತನಿಗೆ ಬಾಡಿ ವಾರಂಟ್ ಹೊರಡಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಉದ್ಯಮಿ ರಾಜೇಶ್ ಅವರು ಕುಳಾ ಮತ್ತು ಹೊಸಬೆಟ್ಟುವಿನಲ್ಲಿ ಸಂಸ್ಥೆಯೊಂದನ್ನು ನಡೆಸುತ್ತಿದ್ದು, ಆರೋಪಿಯು ಅವರ ಕುರಿತು ಅಶ್ಲೀಲ ಮತ್ತು ಸುಳ್ಳು ಆರೋಪಗಳನ್ನು ಸೃಷ್ಟಿಸಿ ವಾಟ್ಸ್ಆ್ಯಪ್ ಮೂಲಕ ಹಂಚುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ರಾಜೇಶ್ ಅವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು.
ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದು ತಪ್ರೊಪ್ಪಿಕೊಂಡಿದ್ದಾನೆ.





