December 19, 2025

SMA ದ.ಕ ಸೌತ್ ಜಿಲ್ಲಾ ಸಮಿತಿವತಿಯಿಂದ FOCUS  25ಲೀಡರ್ಸ್ ಕ್ಯಾಂಪ್

0
image_editor_output_image-371660526-1752592289369

ವಿಟ್ಲ ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ದಕ್ಷಿಣ ಕನ್ನಡ ಸೌತ್ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡ ಲೀಡರ್ಸ್ ಕ್ಯಾಂಪ್ ತಾರೀಖು 13/7/2025 ಟಿಪ್ಪುನಗರ ದಾರುನ್ನಜಾತ್ ಪಿಕೆ ಉಸ್ತಾದ್ ಸ್ಮಾರಕ ಭವನದಲ್ಲಿ ಸಮಯ ಮಧ್ಯಾಹ್ನ 2:30 ಕ್ಕೆ ದ.ಕ ಸೌತ್ ಜಿಲ್ಲಾ ಅಧ್ಯಕ್ಷರಾದ ಯೂಸುಫ್ ಸಾಜ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮವನ್ನು ಎಸ್.ಎಂ.ಎ ರಾಜ್ಯ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಉದ್ಘಾಟಿಸಿ ಮಾತನಾಡಿದ ಅವರು ಎಸ್.ಎಂ.ಎ ಕಳೆದ ಆರು ವರ್ಷಗಳಲ್ಲಿ ರಾಜ್ಯಾದ್ಯಂತ ಮೊಹಲ್ಲಾ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಉತ್ತಮ ಸೇವೆಯನ್ನು ಮಾಡುತ್ತಾ ಬಂದಿದೆ ಮುಂದಿನ ದಿನಗಳಲ್ಲಿ ಎಲ್ಲಾ ರೀಜನ್ ಗಳು ಸಂಘಟಿತವಾಗಿ ಕಾರ್ಯಾಚರಣೆ ನಡೆಸಿ ಎಸ್.ಎಂ.ಎ  ಸಂಘಟನೆಯನ್ನು ಬಲಿಷ್ಠಗೊಳಿಸಬೇಕು ಅದರ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದು ನುಡಿದರು

ಕಾರ್ಯಕ್ರಮದಲ್ಲಿ ಮುಖ್ಯ ವಿಷಯ ಮಂಡನೆ ನಡೆಸಿದ ಪೊಸೋಟು ವಿದ್ಯಾ ಸಂಸ್ಥೆಯ ಪ್ರಿನ್ಸಿಪಾಲ್ ಅಸ್ಸಯ್ಯದ್ ಜಲಾಲುದ್ದೀನ್ ತಂಙಳ್ ಮೊಹಲ್ಲಾಗಳಲ್ಲಿ ಆಡಳಿತ ಸಮಿತಿಗಳು ಒಳ್ಳೆಯ ರೀತಿಯ ಕಾರ್ಯಾಚರಣೆ ಮಾಡುವುದರ ಮೂಲಕ ಮೊಹಲ್ಲಾಗಳಲ್ಲಿ ನಡೆಯುವ ಅನಾಚಾರಗಳಿಗೆ ಕಡಿವಾಣ ಹಾಕಿ ಉತ್ತಮ ಮೊಹಲ್ಲಗಳನ್ನಾಗಿ ಮಾರ್ಪಡಿಸಲು ಆಡಳಿತ ಸಮಿತಿಗಳು ಮುಂದೆ ಬರಬೇಕು ಈ ನಿಟ್ಟಿನಲ್ಲಿ ಎಸ್ಎಂಎ ನಡೆಸುವ ಕಾರ್ಯಕ್ರಮಗಳು ಶ್ಲಾಘನೀಯ ಎಂದು ವಿವರಿಸಿದರು.

ಕಾರ್ಯಕ್ರಮಲ್ಲಿ ಎಸ್ ಎಂ ಎ ಸೌತ್ ಜಿಲ್ಲಾ ಅಧ್ಯಕ್ಷರಾದ ಯೂಸುಫ್ ಸಾಜ ಉಮ್ರಾ ಯಾತ್ರೆ ಕೈಗೊಳ್ಳಲಿರುವುದು ಅವರಿಗೆ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನ ನಡೆಸಲಾಯಿತು.ನಂತರ ರಾಜ್ಯ ಸಮಿತಿ ಜುಲೈ 29 ತಾರೀಕಿಗೆ ಮಂಗಳೂರಿನಲ್ಲಿ ಹಮ್ಮಿಕೊಂಡ ಕ್ಯಾಬಿನೆಟ್ ಇನ್ಫೋ 25 ಕಾರ್ಯಕ್ರಮ ಭಾಗವಹಿಸಿ ಯಶಸ್ವಿಗೊಳಿಸಲು ಕರೆ ನೀಡಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಕೊಳಕೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ
SMA ರಾಜ್ಯ ನಾಯಕರಾದ
SS.ಮೂಸ ಹಾಜಿ ಸಾಂಬರ್ತೋಟ ಅಬ್ದುಲ್ ರಹ್ಮಾನ್ ಸಂಪಿಲ,ಅಬೂಬಕ್ಕರ್ ಸೆರ್ಕಳ,ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ,ವಿಟ್ಲ ಝೋನ್ ಎಸ್ ವೈ ಎಸ್ ಅಧ್ಯಕ್ಷರಾದ ರಹೀಂ ಸಖಾಫಿ ವಿಟ್ಲ ಝೋನ್ ಜಮೀಯ್ಯತುಲ್ ಉಲಮಾ ಅಧ್ಯಕ್ಷರಾದ ಅಬ್ದುಲ್ ಖಾದರ್ ಫೈಝಿ.ಕೆ ಎಂ ಜೆ ವಿಟ್ಲ ಝೋನ್ ಅಧ್ಯಕ್ಷರಾದ ಉಸ್ಮಾನ್ ಹಾಜಿ. ಎಸ್ ಎಮ್ ಎ ಉಪಾಧ್ಯಕ್ಷರಾದ ಲತೀಫ್ ಸಖಾಫಿ ಜಿಲ್ಲಾಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಸೆರ್ಕಳ,ಸಲೀಂ ಹಾಜಿ, ಹಕೀಮ್ ಶಾಂತಿನಗರ, ಉಮರ್ ವಿಟ್ಲ ಖಾದರ್ ಸಅದಿ ಕನ್ಯಾನ ಮತ್ತು ಎಸ್ ಎಂ ಎ ಹಲವು ಜಿಲ್ಲಾ ಝೋನ್ ರೀಜನಲ್ ನಾಯಕರು ಉಪಸ್ಥಿತರಿದ್ದರು ಕೊನೆಗೆ ಜಿಲ್ಲಾ ನಾಯಕರಾದ ಅಬ್ದುಲ್ ಖಾದರ್ ಸಖಾಫಿ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!