September 22, 2026

5 ಸಾವಿರ ಹಣಕ್ಕಾಗಿ ಯುವ ಗಾಯಕನನ್ನು ಕೊಲೆ ಮಾಡಿದ ಸ್ನೇಹಿತರು

0
image_editor_output_image1534722909-1752475046477.jpg

ಬೆಳಗಾವಿ: ಕೇವಲ 5 ಸಾವಿರ ಹಣಕ್ಕಾಗಿ ಯುವ ಗಾಯಕನನ್ನು ಆತನ ಸ್ನೇಹಿತರೇ ಸೇರಿ ಕೊಲೆ ಮಾಡಿದ ಘಟನೆ ಬೆಳಗಾವಿಯ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಕೊಲೆಯಾದ ಯುವಕನನ್ನು ಉತ್ತರ ಕರ್ನಾಟಕದ ಯುವ ಗಾಯಕ ಮಾರುತಿ ಲಠ್ಠೆ (25) ಎಂದು ಗುರುತಿಸಲಾಗಿದೆ.

 

ಸಂಜೆ 7 ಗಂಟೆಗೆ ಸ್ನೇಹಿತರಾದ ಮಾರುತಿ ಘಂಟಿ ಹಾಗೂ ಮಹಾಂತೇಶ್ ಜೊತೆ ಮಾರುತಿ ಲಠ್ಠೆ ಪಕ್ಕದ ದೇವೆಣಕಟ್ಟೆ ಗ್ರಾಮಕ್ಕೆ ತೆರಳಿದ್ದರು. ರಾತ್ರಿ ವಾಪಸ್ ಬರುವಾಗ ಗ್ರಾಮದಲ್ಲಿ ಗಲಾಟೆ ನಡೆದಿದೆ. ಹಣದ ವಿಚಾರಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಮಾರುತಿ ತಲೆಗೆ ರಾಡ್‌ನಿಂದ ಹೊಡೆದು ಸ್ನೇಹಿತರು ಪರಾರಿಯಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!