ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದ ಪತ್ನಿ
ರಾಯಚೂರು: ಫೋಟೋ ತೆಗೆಯುವ ನೆಪದಲ್ಲಿ ಪತ್ನಿಯೇ ಪತಿಯನ್ನ ಕೃಷ್ಣಾ ನದಿಗೆ ತಳ್ಳಿದ ಆಘಾತಕಾರಿ ಘಟನೆ ರಾಯಚೂರಿನಲ್ಲಿ ನಡೆದಿದೆ.
ಸದ್ಯ ಪತಿ ಪ್ರಾಣಾಪಯದಿಂದ ಪಾರಾಗಿದ್ದು, ಪತ್ನಿಯೇ ನನ್ನನ್ನು ನದಿಗೆ ನೂಕಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ.
ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸುತ್ತಿದ್ದು, ತುಂಬಿ ಹರಿಯುತ್ತಿದೆ. ಈ ವೇಳೆ ಸೇತುವೆ ಮಾರ್ಗದಿಂದ ತೆರಳಿದ್ದ ನವದಂಪತಿ ಫೋಟೊ ತೆಗೆಸಿಕೊಳ್ಳಲು ನಿಂತಿದ್ದಾರೆ. ಮೊದಲು ಪತ್ನಿಯ ಪೊಟೊ ತೆಗೆದ ಪತಿ ಬಳಿಕ ತನ್ನ ಫೋಟೊ ತೆಗೆಯಲು ಪತ್ನಿಗೆ ಹೇಳಿದ್ದಾನೆ. ಸೇತುವೆ ತುದಿಗೆ ನಿಲ್ಲಿಸಿದ ಪತ್ನಿ ಫೋಟೋ ತೆಗೆಯುವ ನೆಪದಲ್ಲಿ ನದಿಗೆ ನೂಕಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ.





