ವಿಟ್ಲ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದ ಡಾ. ವೇದಾವತಿ ಬಲ್ಲಾಳ್ ವರ್ಗಾವಣೆ
ವಿಟ್ಲ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಹಿರಿಯ ವೈದ್ಯಾಧಿಕಾರಿ ಡಾ.ವೇದಾವತಿ ಬಲ್ಲಾಳ್‌ರವರು ಪಾಣಾಜೆ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದಾರೆ.
ಪಾಣಾಜೆ ನಿವಾಸಿಯಾಗಿರುವ ಡಾ.ವೇದಾವತಿ ಬಲ್ಲಾಳ್‌ರವರು ತಮ್ಮ ವಿಶೇಷ ಸೇವೆ ನೀಡುವುದುದರ ಮೂಲಕ ವಿಟ್ಲದ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು.
ಇದೀಗ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಭಾರ ಆಡಳಿತ ವೈದ್ಯಾಧಿಕಾರಿಯಾಗಿ ಅಡ್ಯನಡ್ಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ವಿಶೇಶ್ವರ ಭಟ್‌ರವರು ಕರ್ತವ್ಯ ಸಲ್ಲಿಸಲಿದ್ದಾರೆ.





