March 13, 2026

ಸುಳ್ಯ: ತೀವ್ರ ಜ್ವರದಿಂದ ಮಹಿಳೆ ಸಾವು

0
image_editor_output_image-1819589951-1752051029942.jpg

ಸುಳ್ಯ: ವಿಪರೀತ ಜ್ವರದಿಂದ ಯುವತಿಯೋರ್ವರು ಸಾವನ್ನಪ್ಪಿದ ಘಟನೆ ಸುಳ್ಯದ ಮಂಡೆಕೋಲು ಎಂಬಲ್ಲಿ ವರದಿಯಾಗಿದೆ.

ಸುರೇಶ್ ಕಾಮತ್ ಎಂಬವರ ಪತ್ನಿ ಸುಭಾಷಿಣಿ ಅವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾದರು.

ಸುಳ್ಯದ ಮಂಡೆಕೋಲು ಗ್ರಾಮದ ಶಶಿಧರ ನಾಯಕ್ ಹಾಗೂ ಪದ್ಮಾವತಿ ನಾಯಕ್ ದಂಪತಿಯ ಪುತ್ರಿಯಾಗಿರುವ ಇವರು ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ.. ಇಂದು ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ತಾಯಿ, ಸಹೋದರ, ಸಹೋದರಿ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!