December 15, 2025

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಕಾವಳಪಡೂರು‌ ಸರ್ಕಾರಿ ಕಾಲೇಜಿನ “ವಿದ್ಯಾರ್ಥಿಗಳ ಜೊತೆ ಮಾತುಕತೆ” ಕಾರ್ಯಾಗಾರ

0
image_editor_output_image589162539-1751971647117.jpg

ಬಂಟ್ವಾಳ : ಪತ್ರಕರ್ತರ ಸಮಾಜಮುಖೀ ಬರಹಗಳು ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಹೇಳಿದ್ದಾರೆ.

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಕಾವಳಪಡೂರು‌ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ “ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ” ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾಲು ಮಹತ್ವದ್ದು ಎಂದ‌ ಅವರು,ನಿಮ್ಮ ಕಾರ್ಯದಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಪರಿಸರದ ಇನ್ನಷ್ಟು ಸಮಸ್ಯೆಗಳು ಪರಿಹಾರವಾಗಲಿ, ನಿಮ್ಮ ಮೂಲಕ ಉತ್ತಮ ಕಾರ್ಯಗಳಿಗೆ ಹೆಚ್ಚು ಪ್ರಚಾರ ದೊರೆತು,ಸಾರ್ವಜನಿಕರಿಗೆ ಪ್ರಯೋಜನ ವಾಗಲಿ ಎಂದರು.

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

ಪ್ರೌಢಶಾಲಾ ಮುಖ್ಯಶಿಕ್ಷಕ ಶೇಖ್ ಆದಂ ಸಾಹೇಬ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳನ್ನು ತಿದ್ದಿದರೆ, ಪತ್ರಕರ್ತರು ಸಮಾಜವನ್ನು ತಿದ್ದುವ ಕಾರ್ಯ ಮಾಡುತ್ತಿದ್ದಾರೆ,
ಮಕ್ಕಳಿಗೆ ಶಿಕ್ಷಣದ ಜೊತೆ ಮಾಧ್ಯಮ,ಸುದ್ದಿ ವಿಚಾರ ಬಹಳ ಅವಶ್ಯವಾಗಿದ್ದು ಪತ್ರಕರ್ತರು ಈ ಕಾರ್ಯವನ್ನು ನಿಷ್ಠೆಯಿಂದ‌ ಮಾಡುತ್ತಿದ್ದಾರೆ, ಮಕ್ಕಳ ಜೊತೆ ಮಾತುಕತೆ ನಡೆಸುವುದರ ಮೂಲಕ ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದವರು ಶ್ಲಾಘಿಸಿದರು.

ಇದೇ ಸಂದರ್ಭ ಪತ್ರಕರ್ತ ಸಂದೀಪ್ ಸಾಲ್ಯಾನ್ -ವೃತ್ತಪತ್ರಿಕೆಗಳ ಸುತ್ತಮುತ್ತ, ಪತ್ರಕರ್ತ ಹರೀಶ್ ಮಾಂಬಾಡಿ-ಮಾಧ್ಯಮ‌ ಮತ್ತು ಅವಕಾಶಗಳು, ಪತ್ರಕರ್ತ ಮೌನೇಶ ವಿಶ್ವಕರ್ಮ- ಶಿಕ್ಷಣ ಮತ್ತು ರಂಗಭೂಮಿ ಕುರಿತು ವಿಚಾರ ಮಂಡಿಸಿದರು.
ವಿಚಾರ ಮಂಡನೆಯ ಬಳಿಕ‌ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಹಲವು‌ ಸಮಸ್ಯೆಗಳನ್ನು ಪತ್ರಕರ್ತರ ಮುಂದಿಟ್ಟರು.

ಪತ್ರಕರ್ತ ರತ್ನದೇವ್ ಪೂಂಜಾಲಕಟ್ಟೆ ಸ್ವಾಗತಿಸಿದರು, ಪತ್ರಕರ್ತ ವೆಂಕಟೇಶ್ ಬಂಟ್ವಾಳ ಪ್ರಸ್ತಾವನೆಗೈದರು. ಪತ್ರಕರ್ತ ಗಣೇಶ ಪ್ರಸಾದ್ ಪಾಂಡೇಲು ವಂದಿಸಿದರು.‌ ಪತ್ರಕರ್ತರಾದ ಕಿರಣ್ ಸರಪಾಡಿ ಕಾರ್ಯಕ್ರಮ‌ ನಿರ್ವಹಿಸಿದರು. ಪತ್ರಕರ್ತರಾದ ಕಿಶೋರ್‌ ಪೆರಾಜೆ, ವಿಷ್ಣುಗುಪ್ತ ಪುಣಚ, ಅಬ್ದುಲ್‌ ರಹಿಮಾನ್, ಚಂದ್ರಶೇಖರ ಕಲ್ಮಲೆ ಸಹಕರಿಸಿದರು.‌ ಇದೇ ವೇಳೆ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!