ಹಣದ ಅಮಿಷ, ಅಬಾರ್ಷನ್ ವಿಚಾರ ನಾನು ಮಾತಾಡಿಲ್ಲ: ಮುರಳೀಕೃಷ್ಣ ಹಸಂತ್ತಡ್ಕ
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿಗೆ ಜನ್ಮ ನೀಡಿದ ಸಂತ್ರಸ್ತೆಯನ್ನು ಹಿಂದೂ ಸಂಘಟನೆಗಳ ನಿಯೋಗ ಭೇಟಿ ಮಾಡಿ ಸಂತ್ರಸ್ತ ಯುವತಿ ಮತ್ತು ಮಗುವಿನ ಆರೋಗ್ಯ ವಿಚಾರಿಸಿದೆ.
ಹಿಂದೂ ಸಂಘಟನೆ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ನೇತೃತ್ವದ ನಿಯೋಗ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ತಮ್ಮ ಮೇಲಿನ ಆರೋಪಗಳಿಗೆ ಸಂತ್ರಸ್ಥೆ ತಾಯಿ ಜೊತೆ ಜಂಟಿಯಾಗಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ವಿಷಯವನ್ನು ಸಂತ್ರಸ್ತೆ ತಾಯಿ ತಿಳಿಸಿದಾಗ ನಾವು ಹೆಣ್ಣಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ್ದೇವೆ. ಆ ಸಂದರ್ಭದಲ್ಲಿ ಕೇಸು ಒಂದೇ ಪರಿಹಾರವಲ್ಲ ಎಂದಿದ್ದೇವೆ, ಎರಡು ಮನಸ್ಸುಗಳನ್ನು ಸೇರಿಸುವ ಪ್ರಯತ್ನ ಮಾಡಬೇಕೆಂದು ಹೇಳಿದ್ದೆ ಅದು ಬಿಟ್ಟರೆ ಹಣದ ಅಮಿಷ,ಅಬರ್ಷನ್ ವಿಚಾರ ನಾನು ಮಾತಾಡಿಲ್ಲ ಎಂದರು.





