ಕಾರವಾರದಲ್ಲಿ ಭೂ ಕುಸಿತ: ಸಂಪರ್ಕ ರಸ್ತೆ ಬಂದ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆಯಿಂದಾಗಿ ಕಾರವಾರ ತಾಲೂಕಿನ ಕದ್ರಾ ಬಳಿಯ ಬಾಳೆ ಮನೆ ಗ್ರಾಮದ ಬಳಿ ದೊಡ್ಡ ಪ್ರಮಾಣದ ಭೂ ಕುಸಿತವಾಗಿದ್ದು, ಕದ್ರಾ ಭಾಗದ ಬಾಳೆಮನೆ, ಸುಳಗೇರಿ ಕೊಡಸಳ್ಳಿ ಸಂಪರ್ಕ ರಸ್ತೆ ಕಡಿತವಾಗಿದೆ.
ಕದ್ರಾದಿಂದ ಕೊಡಸಳ್ಳಿ ಡ್ಯಾಮ್ ಸಂಪರ್ಕಿಸುವ ರಸ್ತೆ ಭೂಕುಸಿತವಾದ್ದರಿಂದ ಕೊಡಸಳ್ಳಿ ಜಲ ವಿದ್ಯುತ್‌ಗಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಪಿಸಿ ಸಿಬ್ಬಂದಿಗೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.





