ರಹಸ್ಯವಾಗಿ ಶೌಚಾಲಯದಲ್ಲಿ ಮಹಿಳಾ ಉದ್ಯೋಗಿ ವೀಡಿಯೋ ರೆಕಾರ್ಡ್: ಟೆಕ್ಕಿ ಬಂಧನ
ಬೆಂಗಳೂರು: ರಹಸ್ಯವಾಗಿ ಶೌಚಾಲಯದಲ್ಲಿ ಮಹಿಳಾ ಉದ್ಯೋಗಿ ವೀಡಿಯೋ ರೆಕಾರ್ಡ್ ಮಾಡುತ್ತಿದ್ದ ಟೆಕ್ಕಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಆಂಧ್ರಪ್ರದೇಶ ಮೂಲದ ಸ್ವಪ್ನಿಲ್ ನಾಗೇಶ್ ಮಲಿ (28) ಬಂಧಿತ ಟೆಕ್ಕಿ.
ಆರೋಪಿಯು ಕಂಪನಿಯ ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರಹಸ್ಯವಾಗಿ ಮೊಬೈಲ್‌ನಲ್ಲಿ ಮಹಿಳೆಯ ವೀಡಿಯೋ ಮಾಡುತ್ತಿದ್ದು, ಅದರ ಪ್ರತಿಬಿಂಬ ಎದುರುಗಡೆಯ ಬಾಗಿಲು ಮೇಲೆ ಕಾಣಿಸಿತ್ತು. ಇದನ್ನು ಕಂಡ ಮಹಿಳೆ ಕೂಡಲೇ ಹೊರಬಂದು ನೋಡಿದಾಗ ಇನ್ನೋರ್ವ ಮಹಿಳಾ ಸಿಬ್ಬಂದಿ ಮಾತ್ರ ಕಾಣಿಸಿದ್ದರು.





